Read - < 1 minute
ನವದೆಹಲಿ/ಹೈದರಾಬಾದ್, ಆ.31: ರಾಷ್ಟ್ರ ರಾಜಧಾನಿ ನವದೆಹಲಿ, ಗುರ್ಗಾಂವ್, ನೋಯ್ಡಾ ಸೇರಿದಂತೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಹಲವೆಡೆ ಭಾರೀ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.
ದೆಹಲಿಯ ವಾಹನ ದಟ್ಟನೆಯ ರಿಂಗ್ ರೋಡ್‌ಧವಳ ಕುಂವಾ, ಭೈರನ್ ರಸ್ತೆ, ಮಥುರಾ ರಸ್ತೆ, ತೀನ್ ಮೂರ್ತಿ ಹೊರ ಸುತ್ತಿನ ರಸ್ತೆ, ಇಗ್ನೊರವ್ ರಸ್ತೆ, ಐಪಿ ಫ್ಲೈ ಓವರ್, ಸರಾಯ್ ಕಾಲೇ ಖಾನ್, ಬಾರಾಪುಲ್ಲಾ, ಡಿಎನ್‌ಡಿ ಕಡಗೆ ಹೋಗುವ ಫ್ಲೈ ಓವರ್,ಆಶ್ರಮ್ ಚೌಕ್, ಮಹಾರಾಣಿ ಬಾಗ್ ರಿಂಗ್ ರೋಡ್, ಲಜಪತ್ ನಗರ್, ಸರಾಯ್ ಕಾಲೇ ಖಾನ್, ರಾಜಾ ಗಾರ್ಡನ್, ಮ್ಯಾನ್‌ಪುರಿ, ಜಿಮ್‌ಖಾನಾದಿಂದ ತೀನ್ ಮೂರ್ತಿ ಕಡೆಗೆ ಸಾಗುವ ರಸ್ತೆ – ಹೀಗೆ ರಾಷ್ಟ್ರ ರಾಜಧಾನಿಯ ಬಹುತೇಕ ಎಲ್ಲ ರಸ್ತೆಗಳು ನೀರಿನಿಂದ ತುಂಬಿದ್ದು ಇವುಗಳೆಲ್ಲ ನದಿಯಂತೆ ಕಂಡುಬರುತ್ತಿವೆ.
ಭಾರತ ಭೇಟಿಯಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ‌್ರಿ ದೆಹಲಿ ಸುತ್ತಮುತ್ತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ದೆಹಲಿ ಐಐಟಿಗೆ ಭೇಟಿ ನೀಡುವ ಕಾರ್ಯಕ್ರಮ ಕೂಡ ಭಾರೀ ಮಳೆಯಿಂದಾಗಿ ರದ್ದಾಗಿದೆ.
ವಿಮಾನ ಹಾರಾಟ, ರಸ್ತೆ ಸಾರಿಗೆ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ.ದೆಹಲಿ, ಗುರುಂಗಾವ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ಆಫೀಸಿಗೆ, ತಮ್ಮ ವ್ಯಾಪಾರ-ವಹಿವಾಟುಗಳಿಗೆ ತೆರಳುವ ನಾಗರಿಕರು ಭಾರೀ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ವಾಹನ ಸವಾರರು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಕುರಿತಂತೆ ಹವಾಮಾನ ಇಲಾಖೆ ಟ್ವೀಟ್ ಮಾಡಿದ್ದು, ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆ ಸುರಿಯಲಿದೆ ಎಂದಿದೆ.
ಇದೇ ವೇಳೆ ದೆಹಲಿ ಪೊಲೀಸರು ವಾಹನ ಸವಾರರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
1. ನಿಮ್ಮ ವಾಹನದ ಎಕ್ಸಾಸ್ಟ್ ಪೈಪ್ ಮುಳುಗುವಷ್ಟು ನೀರು ತುಂಬಿರುವ ರಸ್ತೆಗಳಲ್ಲಿ ಹೋಗಬೇಡಿ.
2. ರೋಡ್ ಡಿವೈಡರ್‌ಗಳು, ಮರಗಳು, ಫುಟ್‌ಪಾತ್‌ಗಳು, ವಿದ್ಯುತ್ ಕಂಬಗಳು ರಸ್ತೆಯಲ್ಲಿ ಎಷ್ಟು ನೀರು ತುಂಬಿಕೊಂಡಿದೆ ಎನ್ನುವುದನ್ನು ಸೂಚಿಸುವುದನ್ನು ಗಮನಿಸಿ.
Discussion about this post