Read - < 1 minute
ನವದೆಹಲಿ: ಸೆ:24: ಉರಿ ಸೇನಾ ಶಿಬಿರ ಮೇಲಿನ ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರತ್ಯುತ್ತರ ನೀಡಲು ಭಾರೀ ಸಿದ್ಧತೆ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಇಂದು ಮೊದಲನೇ ಹೆಜ್ಜೆಯಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರು ಸೇನಾಪಡೆಗಳ ಮುಖ್ಯಸ್ಥರು ಭೇಟಿ ಮಾಡಿ, ಮಹತ್ವದ ಚರ್ಚೆ ನಡೆಸಿದ್ದಾರೆ.
ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಬೇಕೆಂಬ ದೃಢ ನಿಲುವು ಹೊಂದಿರುವ ಮೋದಿ ಅವರು ಈ ಮೂರು ವಿಭಾಗದ ಸೇನಾ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿರುವ ನಡೆ ತೀವ್ರ ಕತೂಹಲ ಕೆರಳಿಸಿದೆ.
ದೆಹಲಿಯ 7ಲೋಕಕಲ್ಯಾಣಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಭೂ ಸೇನೆಯ ಮುಖ್ಯಸ್ಥ, ಜ.ದಲಬೀರ್ ಸಿಂಗ್, ವಾಯುಸೇನೆ ಏರ್ ಚೀಫ್ ಮಾರ್ಷಲ್ ಅರೂಪ್ ರಾಹಾ ಮತ್ತು ನೌಕಾಸೇನೆಯ ಅಡ್ಮಿರಲ್ ಕರಂಬೀರ್ ಸಿಂಗ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಧಾನಿ ಅವರನ್ನು ಭೇಟಿ ಮಾಡಿ ಪ್ರಸ್ತುತ ಸನ್ನಿವೇಶ ಮತ್ತು ಸೇನಾ ಸಿದ್ಧತೆ ಬಗ್ಗೆ ವಿವರಿಸಿದರು.
ಕಳೆದ ಭಾನುವಾರ ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 18 ಮಂದಿ ಯೋದರು ಹುತಾತ್ಮರಾಗಿದ್ದರು.
Discussion about this post