Read - < 1 minute
ನವದೆಹಲಿ: ಸೆ:24; ಕಾಶ್ಮೀರದ ಉರಿಯಲ್ಲಿ ಭಾರತದ ಸೇನಾ ನೆಲೆ ಮೇಲಿನ ದಾಳಿ ಖಂಡಿಸಿರುವ ಫ್ರಾನ್ಸ್, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಭಾರತದೊಂದಿಗೆ ಇದೆ ಎಂದು ಹೇಳಿದೆ. ಭಯೋತ್ಪಾದನೆ ಹತ್ತಿಕ್ಕಲು ಭಾರತಕ್ಕೆ ಸಹಕರಿಸುವುದಾಗಿ ಫ್ರಾನ್ಸ್ನ್ನ ರಕ್ಷಣಾ ಸಚಿವ ಜೀನ್ ಯ್ವೆಸ್ ಲೆ ಡ್ರಿಯನ್ ಹೇಳಿದ್ದಾರೆ.
ಸೆ.18ರಂದು ನಡೆದ ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಿದ ಫ್ರಾನ್ಸ್ ರಕ್ಷಣಾ ಸಚಿವರು ಭಯೋತ್ಪಾದನೆಯನ್ನು ಪರಿಹರಿಸುವಲ್ಲಿ ದ್ವಿಪಕ್ಷೀಯವಾಗಿ ಭಾರತದೊಂದಿಗೆ ಕೈ ಜೋಡಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಭಾರತದೊಂದಿಗಿನ ಪ್ರಸ್ತುತ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.
ಇನ್ನು ಫ್ರಾನ್ಸ್ನಿಂದ ಖರೀದಿಸುತ್ತಿರುವ 36 ರೈಫೆಲ್ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಸಹಿ ಹಾಕಿರುವುದನ್ನು ಮೋದಿ ಸ್ವಾಗತಿಸಿದ್ದು, ಇದು ಭಾರತದೊಂದಿಗಿನ ಸಮಯೋಚಿತ ಹಾಗೂ ಕ್ಷಿಪ್ರ ಅನುಷ್ಠಾನ ಎಂದಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವೆ 7.87 ಬಿಲಿಯನ್ (59,000 ಕೋಟಿ) ಮೊತ್ತದ 36 ರೈಫಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದವಾಗಿದೆ. ಈ ವಿಮಾನಗಳು ಹಲವು ಮಾಪರ್ಾಡುಗಳನ್ನು ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.
ಕಳೆದ 16 ತಿಂಗಳ ಹಿಂದೆ ಪ್ರಧಾನಿ ಮೋದಿ ಫ್ರಾನ್ಸ್ ಭೇಟಿ ವೇಳೆ ರೈಫಲ್ ವಿಮಾನ ಖರೀದಿಸುವ ಬಗ್ಗೆ ಫ್ರಾನ್ಸ್ ಜತೆ ಮಾತುಕತೆ ನಡೆಸಲಾಗಿತ್ತು.
Discussion about this post