ಶ್ರೀನಗರ,ಸೆ.18 ಭಾರತೀಯ ಸೇನೆ ಮೇಲೆ ದಶಕದಲ್ಲೇ ಕಂಡರಿಯದ ಭೀಕರ ಭಯೋತ್ಪಾದಕ ದಾಳಿ ಭಾನುವಾರ ಬೆಳಿಗ್ಗೆ ನಡೆದಿದೆ.ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್(ಜೆಇಎಂ) ಉಗ್ರ ಸಂಘಟನೆಯ ಶಂಕಿತ ಭಯೋತ್ಪಾದಕರು ಕಾಶ್ಮೀರದ ಉರಿ ವಲಯದಲ್ಲಿನ ಸೇನಾ ಶಿಬಿರದ ಮೇಲೆ ಭಾರೀ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಉಗ್ರರು ನಡೆಸಿದ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದು, ಇತರೆ 20 ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಯೋಧರು ಸೇನಾ ನೆಲೆಗೆ ನುಗ್ಗಿದ ಎಲ್ಲಾ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಈ ಹೀನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ದಾಳಿಯ ಪಾತ್ರಧಾರಿಗಳನ್ನು ಶಿಕ್ಷಿಸದೆ ಬಿಡಲ್ಲ ಎಂದು ತಿಳಿಸಿದ್ದಾರೆ. ಅಂತೆಯೇ ರಾಷ್ಟ್ರಪತಿ ಪ್ರಣಬ್ ಮುಖಜರ್ಿ ಸಹಿತ ಹಲವು ಗಣ್ಯರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಏತನ್ಮಧ್ಯೆ ರಕ್ಷಣಾ ಸಚಿವ ಮನೋಹರ್ ಪಾರೀಕ್ಕರ್ ಮತ್ತು ಸೇನಾ ಮುಖ್ಯಸ್ಥ ಲೆ.ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಶ್ರೀನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ವಿದೇಶ ಪ್ರವಾಸವನ್ನು ಮುಂದೂಡಿ, ರಕ್ಷಣಾ ಇಲಾಖೆಯ ಉನ್ನತಾಕಾರಿಗಳ ಜತೆ ಸಭೆ ನಡೆಸಿದರು.
20 ಸಿಬ್ಬಂದಿಗೆ ಗಾಯ
ಶ್ರೀನಗರಕ್ಕೆ ಸುಮಾರು 70 ಕಿಮೀ ದೂರದಲ್ಲಿರುವ ಮತ್ತು ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಗೆ ಕೆಲವೇ ಕಿಮೀ ದೂರದಲ್ಲಿರುವ ಸೇನಾ ಶಿಬಿರದ ಮೇಲೆ ನಾಲ್ವರಿದ್ದ ಭಾರೀ ಶಸ್ತ್ರಸಜ್ಜಿದ ತಂಡವೊಂದು ಬೆಳಿಗ್ಗೆ 5.30ರ ಸುಮಾರಿಗೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಡೋಗ್ರ ರೆಜಿಮೆಂಟ್ ಹಾಗೂ ಬಿಹಾರ ರೆಜಿಮೆಂಟ್ನ 17 ಯೋಧರು ಹುತಾತ್ಮರಾಗಿದ್ದು, 20ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಶ್ರೀನಗರದಲ್ಲಿನ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸಲಾಗಿದೆ.
ಗಾಯಾಳುಗಳಲ್ಲಿ ಹೆಚ್ಚು ಸಿಬ್ಬಂದಿ ಬೆಂಕಿ ಬಿದ್ದ ಗುಡಾರಗಳಲ್ಲಿ ನಿದ್ರಿಸುತ್ತಿದ್ದವರಾಗಿದ್ದಾರೆ.
4 ಉಗ್ರರ ಸದೆಬಡಿದ ಸೇನೆ
ಸತತ ನಾಲ್ಕು ತಾಸುಗಳ ಗುಂಡಿನ ದಾಳಿ ಬಳಿಕ ನಾಲ್ಕು ಉಗ್ರರನ್ನು ಸೇನೆ ಸದೆಬಡಿದಿದೆ. ಮಾತ್ರವಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಶೋಧ ಕಾರ್ಯ ನಡೆಸಿ, ಶಿಬಿರದ ಪ್ರದೇಶದಲ್ಲಿ ಯಾವುದೇ ಉಗ್ರರು ಇಲ್ಲದಿರುವ ಬಗ್ಗೆ ಸೇನೆ ಖಚಿತಪಡಿಸಿಕೊಂಡಿದೆ.
ಸೋಟಗಳು ಮತ್ತು ಗುಂಡಿನ ಚಕಮಕಿ ನಡೆದ ಸೇನಾ ಶಿಬಿರ, ಆಮರ್ಿ ಬ್ರಿಗೇಡ್ನ ಪ್ರಧಾನ ಕಚೇರಿಗೆ ಕೆಲವೇ ಮೀಟರ್ ದೂರದಲ್ಲಿದೆ. ಸೋಟದಿಂದ ಸಂಭವಿಸಿದ ಬೆಂಕಿಗೆ ಡೋಗ್ರ ರೆಜಿಮೆಂಟ್ನ ಜವಾನರು ನಿದ್ರಿಸುತ್ತಿದ್ದ ಗುಡಾರ ಆಹುತಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆ ಸಮೀಪದ ಬ್ಯಾರಕ್ಗಳಿಗೂ ವ್ಯಾಪಿಸಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕ್ ಸಾಧನಗಳ ಬಳಕೆ
ದಾಳಿಗಾಗಿ ನಾಲ್ಕು ವಿದೇಶಿ ಉಗ್ರರು ಪಾಕಿಸ್ಥಾನದಲ್ಲಿ ತಯಾರಿಸಲ್ಪಟ್ಟ ಸಾಧನಗಳನ್ನು ಬಳಸಿರುವುದು ಪತ್ತೆಯಾಗಿದೆ. ಮಾತ್ರವಲ್ಲದೇ ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ತಿಳಿಸಿದ್ದಾರೆ.
ಉಗ್ರರು ಬಳಸಿದ ಕೆಲ ಉಪಕರಣಗಳು ಪಾಕಿಸ್ಥಾನದಲ್ಲಿ ಉತ್ಪಾದಿಸಲ್ಪಟ್ಟಿವೆ. ಈ ಬಗ್ಗೆ ಪಾಕಿಸ್ಥಾನ ಡಿಜಿಎಂಒ ಜತೆ ದೂರವಾಣಿ ಮೂಲಕ ಮಾತನಾಡಿ ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದೇನೆ ಎಂದು ದೆಹಲಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಲೆ.ಜ. ಸಿಂಗ್ ಉಲ್ಲೇಖಿಸಿದ್ದಾರೆ.
ಎಲ್ಲಿ?
ಶ್ರೀನಗರಕ್ಕೆ ಸುಮಾರು 70 ಕಿಮೀ ದೂರದಲ್ಲಿರುವ ಮತ್ತು ಎಲ್ಒಸಿಗೆ ಕೆಲವೇ ಕಿಮೀ ದೂರದಲ್ಲಿರುವ ಉರಿ ವಲಯದಲ್ಲಿನ ಭಾರತೀಯ ಸೇನಾ ನೆಲೆ
ಯಾವಾಗ?
ಭಾನುವಾರ ಬೆಳಿಗ್ಗೆ 5.30ರ ಸುಮಾರಿನಲ್ಲಿ
ಏನಾಯ್ತು?
ನಾಲ್ವರು ಉಗ್ರರಿಂದ ಏಕಾಏಕಿ ಸೋಟಕ ಮತ್ತು ಗುಂಡಿನ ದಾಳಿ, 17 ಯೋಧರು ಹುತಾತ್ಮ, ಸೇನೆ ಪ್ರತಿದಾಳಿಯಲ್ಲಿ ನಾಲ್ಕೂ ಉಗ್ರರು ಬಲಿ
ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ
ಗೃಹ ಸಚಿವ ರಾಜನಾಥ್ ಕಿಡಿ
ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ. ಅದನ್ನು ಏಕಾಂಗಿ ಮಾಡಬೇಕಿದೆ ಎಂದು ಭಾರತ ಎಚ್ಚರಿಕೆ ಸಂದೇಶ ರವಾನಿಸಿದೆ.
ಸೇನಾ ನೆಲೆ ಮೇಲೆ ನಡೆದ ದಾಳಿಗೆ ಕಟುವಾದ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್, ನುರಿತ ತರಬೇತಿ ಪಡೆದ ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿ ಹಿಂದಿನ ಕೈಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪಾಕಿಸ್ಥಾನ ಭಯೋತ್ಪಾದನೆಗೆ ನೇರವಾಗಿಯೇ ಬೆಂಬಲ ನೀಡುತ್ತಿದ್ದೆ ಎಂದು ಆಪಾದಿಸಿದ ಅವರು, ಪಾಕಿಸ್ತಾನ ಭಯೋತ್ಪಾದ ರಾಷ್ಟ್ರ ಅದನ್ನು ಏಕಾಂಗಿಯಾಗಿ ಮಾಡಬೇಕು ಎಂದು ಹೇಳಿದ್ದಾರೆ.
ದಾಳಿಯ ಬಳಿಕ ತಮ್ಮ ರಷ್ಯಾ ಹಾಗೂ ಅಮೆರಿಕ ಭೇಟಿಯ ಪ್ರವಾಸವನ್ನು ಮುಂದೂಡಿ ದೆಹಲಿಯ ತಮ್ಮ ನಿವಾಸದಲ್ಲಿ ರಕ್ಷಣಾಪಡೆಯ ಉನ್ನತಾಕಾರಿಗಳ ತುತರ್ು ಸಭೆ ನಡೆಸಿದ ಸಚಿವರು, ಸಭೆಯಲ್ಲಿ ಪಡೆದ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ.
ಘಟನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೋವನ್ನು ಬರಿಸುವ ಶಕ್ತಿ ಲಭಿಸಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾಥರ್ಿಸುತ್ತೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ರೂವಾರಿಗಳನ್ನು ಶಿಕ್ಷಿಸದೆ ಬಿಡಲ್ಲ
ಪ್ರಧಾನಿ ಮೋದಿ ಶಪಥ
ಜಮ್ಮು-ಕಾಶ್ಮೀರದ ಉರಿ ಸೇನಾ ವಲಯದಲ್ಲಿರುವ ಭಾರತೀಯ ಸೇನಾ ಕೇಂದ್ರದ ಮೇಲೆ ಉಗ್ರರು ನಡೆಸಿದ ಹೀನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅತ್ಯಂತ ತುಚ್ಛ ಹಾಗೂ ಹೀನ ಕೃತ್ಯದ ಹಿಂದೆ ಇರುವವರನ್ನು ಶಿಕ್ಷೆಗೊಳಪಡಿಸದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಉರಿ ಸೆಕ್ಟರ್ನಲ್ಲಿ ಭಯೋತ್ಪಾದಕರು ನಡೆಸಿದ ಹೇಡಿತನದ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸುತ್ತೇನೆ. ಈ ರೀತಿಯ ತುಚ್ಛ ದಾಳಿಯ ಹಿಂದೆ ಇರುವವರನ್ನು ಶಿಕ್ಷೆಗೊಳಪಡಿಸದೆ ಬಿಡುವುದಿಲ್ಲ ಎಂದು ದೇಶದ ಜನತೆ ಭರವಸೆ ನೀಡುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿರುವ ಪ್ರಧಾನಿ ಮೋದಿ, ದೇಶ ರಕ್ಷಣೆಗೆ ಹುತಾತ್ಮ ಯೋಧರ ಸೇವೆ ಸದಾ ಸ್ಮರಣೀಯ ಎಂದಿದ್ದಾರೆ.
ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ಹುಟ್ಟು ಹಾಕುತ್ತಿರುವ
ಪಾಕಿಸ್ಥಾನ ವಿರುದ್ಧ ಭಾರತ ಪರೋಕ್ಷ ದಾಳಿ
ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಭಾರತವು ಭಾನುವಾರ ಅತ್ಯಂತ ಪ್ರಮುಖ ದಕ್ಷಿಣ – ದಕ್ಷಿಣ ಸಹಕಾರ ವೇದಿಕೆಯಾದ ಅಲಿಪ್ತ ಶೃಂಗಸಭೆ (ನಾಮ್)ಯಲ್ಲಿ ಪಾಕಿಸ್ಥಾನವನ್ನು ಹೆಸರಿಸದೆ ಒತ್ತಾಯಿಸಿತಲ್ಲದೆ, ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿರುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದದ ತನ್ನ ಉಪಕ್ರಮಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿತು.
ಇಂದು ಅಂತಾರಾಷ್ಟ್ರೀಯ ಶಾಂತಿ ಮತ್ತು ದೇಶಗಳ ಸಾರ್ವಭೌಮತ್ವಕ್ಕೆ ಭಯೋತ್ಪಾದನೆಯ ಎದುರು ಅತ್ಯಂತ ದೊಡ್ಡ ಬೆದರಿಕೆಯಾಗಿದೆ ಎಂದು ಉಪ ರಾಷ್ಟ್ರಪತಿ ರಮೀದ್ ಅನ್ಸಾರಿ ಶನಿವಾರ ವೆನೆಜುವೆಲ್ಲಾದ ಮಾರ್ಗರಿಬಾ ದ್ವೀಪದಲ್ಲಿ ನಡೆದ 17ನೇ ಅಲಿಪ್ತ ಶೃಂಗಸಭೆ (ನಾಮ್)ಯಲ್ಲಿ ಭಾಷಣ ಮಾಡುತ್ತಾ ಹೇಳಿದರು.
ರಾಜಕೀಯ ಗುರಿ ಅಥವಾ ನೀತಿಗಳ ಬದಲಾವಣೆಯನ್ನು ಸಾಸುವುದಕ್ಕಾಗಿ ಮುಗ್ದ ನಾಗರಿಕರನ್ನು ಮನಬಂದಂತೆ ಕೊಲ್ಲುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಭಯೋತ್ಪಾದನೆಯು ಇಂದು ಮಾನವ ಹಕ್ಕು ಉಲ್ಲಂಘನೆಯ ಅತ್ಯಂತ ಹೇಯ ಕೃತ್ಯಗಳಲ್ಲಿ ಒಂದಾಗಿದೆ. ಸರಕಾರದ ನೀತಿಯ ಒಂದು ಸಾಧನವಾಗಿ ಅದರ ಬಳಕೆಯನ್ನು ಸ್ಪಷ್ಟವಾಗಿ ಖಂಡಿಸಬೇಕಾಗಿದೆ ಎಂದರು.
ಅಭಿವೃದ್ದಿಗೆ ಅದೊಂದು ಪ್ರಮುಖ ತೊಡಕಾಗಿದೆ ಎಂದು ವಿಷಾದಿಸಿದರು. ಆದ್ದರಿಂದ ಈ ಪಿಡುಗನ್ನು ನಿವಾರಿಸಲು ಅಂತಾರಾಷ್ಟ್ರೀಯ ಕಾನೂನು ಚೌಕಟ್ಟನ್ನು ಬಲಪಡಿಸಲು ಅಂತಾರಾಷ್ಟ್ರೀಯ ಸಮುದಾಯವನ್ನು ಹುರಿದುಂಬಿಸುವುದು ಅಲಿಪ್ತ ಚಳವಳಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಭಯೋತ್ಪಾದನೆಯ ಹಾವಳಿಯನ್ನು ಎದುರಿಸಲು ಅಂತಾರಾಷ್ಟ್ರೀಯ ಸಮುದಾಯಗಳ ನಡುವೆ ನಿಕಟ ಸಹಕಾರವನ್ನು ಖಾತ್ರಿಪಡಿಸಲು ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆಯ ಸಮಗ್ರ ಒಪ್ಪಂದ ಅಂಗೀಕಾರವಾಗಬೇಕು ಎಂದು ಅವರು ಒತ್ತಿ ಹೇಳಿದರು.
ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ದೃಢ ಕ್ರಮವೊಂದಕ್ಕಾಗಿ ಕರೆ ನೀಡಿದ ಉಪರಾಷ್ಟ್ರಪತಿಯವರು, ಭಯೋತ್ಪಾದನೆಯನ್ನು ಎದುರಿಸಲು ಪರಿಣಾಮಕಾರಿ ಸಹಕಾರದ ಖಾತ್ರಿಗಾಗಿ ನಾಮ್ನೊಳಗೆ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು.
ದಕ್ಷಿಣ ಅಮೆರಿಕದ ದೇಶ ಏರ್ಪಡಿಸಿರುವ ಅಭಿವೃದ್ದಿಶೀಲ ದೇಶಗಳ ಅತ್ಯಂತ ಪ್ರಮುಖ ಶೃಂಗಸಭೆಗೆ ತೆರಳಿರುವ ಭಾರತೀಯ ನಿಯೋಗದ ನೇತೃತ್ವವನ್ನು ಅನ್ಸಾರಿ ವಹಿಸಿಕೊಂಡಿದ್ದಾರೆ.
ಉರಿ ದಾಳಿ : ಕಾಶ್ಮೀರದಲ್ಲಿ ಅಶಾಂತಿ
ಹರಡುವ ಪಾಕ್ ಗೇಮ್ ಪ್ಲಾನ್ನ ಭಾಗ
ಉರಿ, ಬಾರಾಮುಲ್ಲಾ : ಒಂದು ದಶಕದ ಅವಯಲ್ಲೇ ಜಮ್ಮು – ಕಾಶ್ಮೀರ ಕಂಡ ಅತ್ಯಂತ ಭೀಕರ ದಾಳಿಯೊಂದರಲ್ಲಿ 17 ಯೋಧರ ಬಲಿದಾನವಾಗಿದೆ. ನಿಯಂತ್ರಣ ರೇಖೆ ಸಮೀಪ ಜಮ್ಮು – ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಯೋಧರ ಹತ್ಯಾಕಾಂಡ ನಡೆಸಿದ್ದಾರೆ. ದಾಳಿ ಗೈದ ಎಲ್ಲ ನಾಲ್ವರು ಭಯೋತ್ಪಾದಕರನ್ನು ಯೋಧರು ಕೊಂದು ಕೆಡವಿದ್ದಾರೆ.
ಈ ದಾಳಿಯು ಜಮ್ಮು – ಕಾಶ್ಮೀರದಲ್ಲಿ ಅಶಾಂತಿಯನ್ನು ಹರಡುವ ಪಾಕಿಸ್ಥಾನದ ದೊಡ್ಡ ಸಂಚೊಂದರ ಭಾಗವಾಗಿದೆ ಎಂದು ಉನ್ನತ ಸರಕಾರಿ ಮೂಲಗಳು ಹೇಳಿವೆ.
ಜು. 8ರಂದು ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರ ಬುಹರ್ಾನ್ ವಾನಿಯನ್ನು ಗುಂಡಿಕ್ಕಿ ಕೊಂದ ನಂತರದಿಂದ ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಹಿಂಸಾಚಾರ ನಡೆಯುತ್ತಿದೆ. ಅಂದಿನಿಂದ ಪ್ರತಿಭಟನೆಗಳಲ್ಲಿ 80ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಅನೇಕರು ಭದ್ರತಾ ಸಿಬ್ಬಂದಿಗಳಾಗಿದ್ದಾರೆ.
ಭಾನುವಾರ ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ದಾಳಿ ಆರಂಭವಾಗಿತ್ತು. ಪಾಕಿಸ್ಥಾನವು ಕಾಶ್ಮೀರದಲ್ಲಿ ಅಶಾಂತಿ ಹರಡಲು ಕುಮ್ಮಕ್ಕು ನೀಡುತ್ತಿದೆ ಎಂದು ಸರಕಾರ ಆರೋಪಿಸಿದೆ. ಪಾಕಿಸ್ಥಾನ ಸರಕಾರ ಪ್ರತಿಭಟನೆಗಳನ್ನು ಬಹಿರಂಗವಾಗಿಯೇ ಬೆಂಬಲಿಸಿದೆ. ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸಿದೆ. ಬುಹರ್ಾನ್ ವಾನಿಯನ್ನು ಪ್ರಸಿದ್ಧ ಪುರುಷನನ್ನಾಗಿ ಮೆರೆಯಿಸುತ್ತಿದೆ.
ಭಾನುವಾರ ಮುಂಜಾನೆ ಉರಿಯಲ್ಲಿ ಸೇನೆಯ ಆಡಳಿತಾತ್ಮಕ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಸುಮಾರು ಆರು ತಾಸು ಕಾಲ ಗುಂಡಿನ ಕಾಳಗ ನಡೆಯಿತು. ಫಿದಾಯೀನ್ ಅಥವಾ ಆತ್ಮಹತ್ಯಾ ದಳ ಎಂದು ಶಂಕಿಸಲಾದ ಭಯೋತ್ಪಾದಕರು ಮುಂಜಾನೆ ಸುಮಾರು 4 ಗಂಟೆಗೆ ನೆಲೆಯೊಳಗೆ ನುಸುಳಿ ಆಡಳಿತಾತ್ಮಕ ಪ್ರದೇಶವನ್ನು ಪ್ರವೇಶಿಸಿದ್ದರು ಎಂದು ಅಕಾರಿಗಳು ಹೇಳಿದ್ದಾರೆ. ಗಾಯಾಳುಗಳನ್ನು ಶ್ರೀನಗರದಲ್ಲಿರುವ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಆರಂಭವಾಗಬೇಕಿದ್ದ ರಶ್ಯಾ ಮತ್ತು ಅಮೆರಿಕ ಭೇಟಿಯನ್ನು ಮುಂದೂಡಿದ್ದಾರೆ.
ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಜಮ್ಮು – ಕಾಶ್ಮೀರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ರಾಜ್ಯದಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಅವರು ನನಗೆ ವಿವರಿಸಿದರು ಎಂದು ರಾಜನಾಥ್ ಟ್ವೀಟ್ ಮಾಡಿದ್ದಾರೆ.
ಈ ವರ್ಷ ಜಮ್ಮು – ಕಾಶ್ಮೀರದಲ್ಲಿ
ನಡೆದ ಭಯೋತ್ಪಾದಕ ದಾಳಿಗಳತ್ತ ಒಂದು ನೋಟ
ಭಾನುವಾರ ಮುಂಜಾನೆ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಾರತೀಯ ಸೇನೆಯ ಕಾಲಾಳು ತುಕಡಿಯ ಹಿಂಗಾಪಿನ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 17 ಮಂದಿ ಯೋಧರು ಬಲಿದಾನವಾಗಿರುವುದನ್ನು ಸೇನೆಯು ದೃಢಪಡಿಸಿದೆ. ನಾಲ್ವರು ಭಯೋತ್ಪಾದಕರನ್ನು ನಿಶಸ್ತ್ರಗೊಳಿಸಲಾಗಿದ್ದು ಶೋಧ ಕಾಯರ್ಾಚರಣೆ ನಡೆಯುತ್ತಿದೆ ಎಂದೂ ಹೇಳಿದೆ.
ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಖಂಡಿಸಿ ಸಂಚುಗಾರರನ್ನು ದಂಡಿಸಲಾಗುವುದು ಎಂದು ಹೇಳಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಗೃಹ ಮತ್ತು ರಕ್ಷಣಾ ಖಾತೆಯ ಅಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪಾರ್ರಿಕರ್ ಅವರು ಜಮ್ಮು – ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದೂ ಪ್ರಧಾನಿ ಹೇಳಿದ್ದಾರೆ.
ಸೇನಾ ನೆಲೆಯ ಸುತ್ತಮುತ್ತ ಮತ್ತು ಎಲ್ಒಸಿಯನ್ನು ಸಂಪಕರ್ಿಸುವ ರಸ್ತೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗುಂಡಿನ ಕಾಳಗದಲ್ಲಿ ಅನೇಕ ಟೆಂಟ್ಗಳಿಗೆ ಬೆಂಕಿ ತಗಲಿದೆ.
ಏನಿದ್ದರೂ, ಇದು ಈ ವರ್ಷ ನಡೆದ ಅಂತಹ ಮೊದಲ ದಾಳಿಯೇನೂ ಅಲ್ಲ. ಈ ವರ್ಷ ಜಮ್ಮು – ಕಾಶ್ಮೀರದಲ್ಲಿ ಭಾರತ – ಪಾಕಿಸ್ಥಾನ ಗಡಿಯಾಚೆಯಿಂದ ಭಯೋತ್ಪಾದಕರ ನುಸುಳುವಿಕೆ ಪ್ರಯತ್ನಗಳು ಹೆಚ್ಚಿವೆ. ಜೂನ್ 30ರ ತನಕ 90 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದವು ಎಂದು ಸಹಾಯಕ ಗೃಹ ಸಚಿವ ಹನ್ಸ್ರಾಜ್ ಅಹಿರ್ ರಾಜ್ಯಸಭೆಯಲ್ಲಿ ಹೇಳಿದ್ದರು.
ಪೂಂಛ್ ದಾಳಿ
ಸೆಪ್ಟೆಂಬರ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯ ಎದುರು ಗಡೆ ಇರುವ ಮಿನಿ ಸಚಿವಾಲಯ ಕಟ್ಟಡದಲ್ಲಿ ಸಿಕ್ಕಿಬಿದ್ದಿದ್ದ ನಾಲ್ವರು ಭಯೋತ್ಪಾದಕರನ್ನು ಶಸ್ತ್ರಗೊಳಿಸಲು ಭದ್ರತಾ ಪಡೆಗಳು ಮತ್ತು ಪೊಲೀಸರು ಮೂರು ದಿನಗಳ ಸುದೀರ್ಘ ಕಾಯರ್ಾಚರಣೆ ನಡೆಸಿದ್ದರು. ಭಾರೀ ಶಸ್ತ್ರ ಸಜ್ಜಿತರಾಗಿದ್ದ ಭಯೋತ್ಪಾದಕರ ಎರಡು ತಂಡಗಳು ಪೂಂಛ್ ಪಟ್ಟಣದ ಮೇಲೆ ದಾಳಿ ನಡೆಸಿ ಓರ್ವ ಪೊಲೀಸ್ ಕಾನ್ಸ್ಟೇಬಲ್, ಇಬ್ಬರು ಸೇನಾ ಯೋಧರು, ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ನಾಗರಿಕರನ್ನು ಹತ್ಯೆ ಗೈದಿದ್ದರು.
ಪುಲಾಮಾ
ಸೆ. 9ರಂದು ಭಯೋತ್ಪಾದಕರು ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಶಿಬಿರವೊಂದರ ಮೇಲೆ ದಾಳಿ ನಡೆಸಿದ್ದರು. ಆದರೆ ಭದ್ರತಾ ಪಡೆಗಳ ಪ್ರತಿದಾಳಿಯನ್ನು ಎದುರಿಸಲಾಗಿದೆ. ಪಲಾಯನ ಗೈದಿದ್ದರು. ಈ ಘಟನೆಯಲ್ಲಿ ಯಾವುದೇ ಸಾವು – ನಾವು ಅಥವಾ ಹಾನಿ ತಟ್ಟಿಲ್ಲ.
ಖವಾಜ ಬಾಗ್ ದಾಳಿ
ಸ್ವಾತಂತ್ರ್ಯೋತ್ಸವ ದಿನದ ಕೇವಲ ಎರಡು ದಿನಗಳ ನಂತರ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರು ಶ್ರೀನಗರ – ಬಾರಾಮುಲ್ಲಾ ಹೈವೇ ಸಮೀಪ ಸೇನಾ ವಾಹನಗಳ ಸಾಲೊಂದರ ಮೇಲೆ ದಾಳಿ ನಡೆಸಿ ಎಂಟು ಜನರ ಹತ್ಯೆ ನಡೆಸಿದ್ದರು. ಇತರ 22 ಮಂದಿ ಗಾಯಗೊಂಡಿದ್ದರು. ಖವಾಜಬಾಗ್ ದಾಳಿಯು ಆ. 15ರ ನಂತರ ಭಯೋತ್ಪಾದಕರು ನಡೆಸಿದ ಮೂರನೇ ದಾಳಿಯಾಗಿತ್ತು.
ಸ್ವಾತಂತ್ರ್ಯದಿನದಂದು ಶ್ರೀನಗರದ ಸೌಹಾಟ್ಟಾದಲ್ಲಿ ನಡೆದ ದಾಳಿಯೊಂದರಲ್ಲಿ ಓರ್ವ ಸಿಆರ್ಪಿಎಫ್ ಕಮಾಂಡೆಂಟ್ ಮತ್ತು ಇಬ್ಬರು ಉಗ್ರರು ಹತರಾಗಿ ಇತರ 9 ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಆಗಸ್ಟ್ 19ರಂದು ಕುಪ್ವಾರಾ ಜಿಲ್ಲೆಯಲ್ಲಿ ಬಿಎಸ್ಸೆಫ್ ನೆಲೆಯೊಂದರ ಮೇಲೂ ಭಯೋತ್ಪಾದಕರು ದಾಳಿ ನಡೆಸಿದ್ದರು.
ಜುಲೈಯಲ್ಲಿ ಕುಪ್ವಾರಾ ಜಿಲ್ಲೆಯಲ್ಲಿ ಎಲ್ಒಸಿ ಸಮೀಪ ನಡೆದ ನುಸುಳುವಿಕೆ ಯತ್ನವೊಂದನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಭಯೋತ್ಪಾದಕರು ಓರ್ವ ಯೋಧನನ್ನು ಬಲಿ ತೆಗೆದುಕೊಂಡಿದ್ದರು.
ಪಾಂಪೋರ್ ದಾಳಿ
ಜೂನ್ನಲ್ಲಿ ಪಾಂಪೋರ್ ಸಮೀಪ ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯೋತ್ಪಾದಕರು ಸಿಆರ್ಪಿಎಫ್ ಯೋಧರ ವಾಹನಗಳ ಸಾಲೊಂದರ ಮೇಲೆ ದಾಳಿ ನಡೆಸಿ ಎಂಟು ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದಿದ್ದರು. ಕನಿಷ್ಠ ಇತರ 20 ಮಂದಿ ಗಾಯಗೊಂಡಿದ್ದರು. ಲಷ್ಕರ್-ಇ-ತೊಬಾ ಈ ದಾಳಿಯ ಹೊಣೆ ಹೊತ್ತಿತ್ತು.
ಜೂ. 4ರಂದು ಅನಂತನಾಗ್ ಪಟ್ಟಣದಲ್ಲಿ ಇಬ್ಬರು ಶಸ್ತ್ರಧಾರಿ ಉಗ್ರರು ಪೊಲೀಸ್ ಚೆಕ್ಪೋಸ್ಟ್ ಒಂದರ ಮೇಲೆರಗಿ ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್ನ್ನು ಹತ್ಯೆಗೈದು ಪರಾರಿಯಾಗಿದ್ದರು. ಜೂ. 3ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಬಿಜ್ಬೆಹ್ರಾದಲ್ಲಿ ಟಿಎಸ್ಸೆಫ್ ವಾಹನಗಳ ಸಾಲೊಂದರ ಮೇಲೆರಗಿ ಮೂವರು ಯೋಧರ ಹತ್ಯೆ ನಡೆಸಿದ್ದರು. ಫೆಬ್ರವರಿಯಲ್ಲಿ ದಕ್ಷಿಣ ಕಾಶ್ಮೀರದ ಪಾಂಪೋರ್ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಂತಹುದೇ ದಾಳಿಯಲ್ಲಿ ಇಬ್ಬರು ಸಿಆರ್ಪಿಎಫ್ ಯೋಧರು ಹ ತರಾಗಿ ಇತರ 11 ಮಂದಿ ಗಾಯಗೊಂಡಿದ್ದರು. ನಂತರ ಉಗ್ರರು ಸಮೀಪದ ಸಂಸ್ಥೆಯೊಂದರಲ್ಲಿ ಅಡಗಿ ಕುಳಿತಿದ್ದು ಮೂರು ದಿನಗಳ ಕಾಲ ನಡೆದ ಎನ್ಕೌಂಟರ್ನಲ್ಲಿ ಅವರನ್ನು ಕೊಂದು ಕೆಡವಲಾಗಿತ್ತು. ಇಬ್ಬರು ಕ್ಯಾಪ್ಟನ್ಗಳು ಮತ್ತು ವಿಶೇಷ ಪಡೆಯ ಓರ್ವ ಯೋಧ ಕೂಡಾ ಗುಂಡಿನ ದಾಳಿಗಳಲ್ಲಿ ಅಸು ನೀಗಿದ್ದರು.
ಪಠಾಣ್ಕೋಟ್ ವಾಯುನೆಲೆ ದಾಳಿ
ಜನವರಿಯಲ್ಲಿ ಭಾರೀ ಶಸ್ತ್ರಸಜ್ಜಿತ ಆರು ಮಂದಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕರು ನಸುಕಿನಲ್ಲಿ ಪಠಣ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿ ಎಳು ಮಂದಿ ಭದ್ರತಾ ಪಡೆ ಸಿಬ್ಬಂದಿಗಳನ್ನು ಜೀವ ಬಲಿತೆಗೆದುಕೊಂಡಿದ್ದರು.
ಉಗ್ರರ ಕೈಗೆ ಬಲವಾದ ಆಯುಧ
ಆತ್ಮಾಹುತಿ ದಾಳಿಕೋರರನ್ನು ಬಳಸಿಕೊಳ್ಳುವ ಮೂಲಕ ಉಗ್ರರು ಭಾರತದ ರಕ್ಷಣಾ ಸಂಸ್ಥೆ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಜಮ್ಮು-ಕಾಶ್ಮೀರದ ಉರಿ ಸೇನಾವಲಯದ ಮೇಲೆ ನಡೆದ ದಾಳಿಯು 1990 ರ ದಾಳಿಯನ್ನು ಹೋಲುವಂತಿದೆ. ಕಾಶ್ಮೀರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಆತ್ಮಾಹುತಿ ದಾಳಿಕೋರರು ಉಗ್ರರ ಕೈಗೆ ಬಲವಾದ ಆಯುಧವಾಗಿ ಮಾರ್ಪಟ್ಟಿದ್ದಾರೆ. ಅಲ್ಲದೆ, ಪ್ರತ್ಯೇಕತಾವಾದಿಗಳ ರಾಜಕೀಯ ಕಾರ್ಯಸೂಚಿಗಳಿಗೆ ಶಕ್ತಿ ನೀಡುವಂತಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತದ ರಕ್ಷಣಾ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸುವ ಮೂಲಕ ಸೇನಾ ಪಡೆಯ ಬಲ ಕುಗ್ಗಿಸುವ ಪ್ರಯತ್ನವೂ ಮುಂದುವರೆದಿದೆ.
ಕಾಶ್ಮೀರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅಶಾಂತಿ ವಾತಾವರಣ, ಹಿಂಸಾಚಾರವನ್ನು ಗಮನಿಸಿದರೆ, ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಕೆರಳಿಸುವ ಉದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.
ಪ್ರತಿಭಟನಾಕಾರರೊಂದಿಗೆ ಸೇನಾಪಡೆ ಅಥವಾ ಭಾರತ ಸಕರ್ಾರ ಶಾಂತಿಗೆ ಮುಂದಾಗುವ ಯಾವುದೇ ಪ್ರಕ್ರಿಯೆಗಳನ್ನು ನಿರಾಕರಿಸುತ್ತಿರುವುದೂ ಸ್ಪಷ್ಟವಾಗಿದೆ.
2013ರಲ್ಲಿ ಆತ್ಮಾಹುತಿ ದಾಳಿಕೋರರಿಂದ ದಾಳಿ ನಡೆದಿತ್ತು. 1999-2002ರ ಸಮಯದಲ್ಲಿ ರಾಜ್ಯದಲ್ಲಿ ಉಗ್ರರ ಚಟುವಟಿಕೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ರಕ್ಷಣಾ ಸಂಸ್ಥೆ ಮತ್ತು ಸೇನಾ ಪಡೆಗಳ ಮೇಲೆ ಆತ್ಮಹತ್ಯಾ ದಾಳಿ ಪದೇಪದೆ ನಡೆದಿತ್ತು. ಇದೀಗ ತಮ್ಮ ದಾಳಿಯ ಶೈಲಿಗಳನ್ನು ಬದಲಾಯಿಸಿಕೊಂಡಿರುವ ಆತ್ಮಹತ್ಯಾ ದಾಳಿಕೋರರು ಗಡಿ ನಿಯಂತ್ರಣ ರೇಖೆ ಸಮೀಪದ ಶಸ್ತ್ರ ಸಜ್ಜಿತ ಪಡೆಗಳನ್ನೇ ನಿದರ್ಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಈ ರೀತಿಯ ದಾಳಿಗಳಿಂದಾಗಿ ಕಾಶ್ಮೀರವನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಉಗ್ರರಿಗೆ ಬಲವಾದ ಆಯುಧ ಸಿಕ್ಕಂತಾಗಿದೆ ಎನ್ನಲಾಗಿದೆ.
Discussion about this post