ಬಿಶ್ಕೆಕ್, ಆ.30: ಕರ್ಗಿಸ್ತಾನದಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ವೇಳೆ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಕರಣ ಸಂಬಂಧ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಿರುವ ಬಿಶ್ಕೆಕ್ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು, ಮಿತ್ಶುಬಿಶಿ ಡೆಲಿಕಾ ಕಾರಿನಲ್ಲಿ ವೇಗವಾಗಿ ಅಗಮಿಸಿದ ಆಗಂತುಕನೋರ್ವ ರಾಯಭಾರ ಕಚೇರಿಯ ಗೇಟ್ ಗೆ ಗುದ್ದಿದ್ದು, ಭದ್ರತಾ ಅಧಿಕಾರಿಗಳು ಸಮೀಪಕ್ಕೆ ಆಗಮಿಸುತ್ತಿದ್ದಂತೆಯೇ ಬಾಂಬ್ ಸ್ಫೋಟಗೊಳಿಸಿದ್ದಾನೆ. ಈ ವೇಳೆ ಆತ ಮೃತನಾಗಿದ್ದು, ಸ್ಥಳದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅಲ್ಲಿನ ಉಪಪ್ರಧಾನಿ ಜೆನಿಶ್, ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಓರ್ವ ಉಗ್ರ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಪ್ರಕರಣದ ದಾಖಲಾಗಿದ್ದು, ಇಡೀ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
Discussion about this post