ಬೆಳಗಾವಿ: ಸೆ:25; ಸಾಹಿತಿ ಡಾ. ಕಲಬುರ್ಗಿ ಹತ್ಯೆಗೂ ಸನಾತನ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ, ಸನಾತನ ಸಂಸ್ಥೆಯ ಯಾವುದೇ ವ್ಯಕ್ತಿಯು ಹತ್ಯೆಯಲ್ಲಿ ಕೈವಾಡವಿಲ್ಲ ಎಂದು ಸನಾತನ ಸಂಸ್ಥೆ ರಾಷ್ಟ್ರೀಯ ವಕ್ತಾರ ಅಭಯ ವರ್ತಕ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಅಭಯ ವರ್ತಕ, ಮಹಾರಾಷ್ಟ್ರ ಪೊಲೀಸರು ಸನಾತನ ಸಂಸ್ಥೆ ವಿರುದ್ಧ ಷಡ್ಯಂತ್ರದ ರೂಪಿಸಿದೆ.ಹೀಗಾಗಿ ಸಮೀರ್ ಗಾಯಕವಾಡನನ್ನ ಪಾನ್ಸಾರೆ ಹತ್ಯೆಯಲ್ಲಿ ಬಂಧಿಸಲಾಗಿದೆ.ಆದರೆ ಈವರೆಗೂ ಮಹಾರಾಷ್ಟ್ರ ಪೊಲೀಸರಿಂದ ನ್ಯಾಯಾಲಯಕ್ಕೆ ಸಾಕ್ಷಿಗಳನ್ನ ಒದಗಿಸಿಲ್ಲ,ಚಾಜರ್್ ಶೀಟ್ ಸಲ್ಲಿಸಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಈಗ ಕನರ್ಾಟಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಪೊಲೀಸರಂತೆ ಕನರ್ಾಟಕ ಪೊಲೀಸರು ಅನುಸರಿಸದೇ, ಯಾವುದೇ ಪಕ್ಷಪಾತವಿಲ್ಲದೇ ಕನರ್ಾಟಕ ಪೊಲೀಸರು ತನಿಖೆ ಮಾಡಲು ಆಗ್ರಹಿಸಿದರು.
ಎಲ್ಲ ದೃಷ್ಟಿ ಕೊನದಿಂದ ಕನರ್ಾಟಕ ಪೊಲೀಸರು, ಕಲಬುಗರ್ಿ ಹತ್ಯೆ ಪ್ರಕರಣವನ್ನ ತನಿಖೆ ಮಾಡಬೇಕು, ಸನಾತನ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡಬೇಡಿ, ಈವರೆಗೂ ಸನಾತನ ಸಂಸ್ಥೆಯ
1000ಜನರನ್ನ ವಿಚಾರಣೆ ಮಾಡಲಾಗಿದೆ.ಕಲಬುಗರ್ಿ ಕೊಲೆ ಆಗುವ ವರೆಗೂ ಅವರ ಹೆಸರು ನಮಗೆ ಗೊತ್ತಿರಲಿಲ್ಲ ಎಂದು ಹೇಳಿದರು.
Discussion about this post