Read - < 1 minute
ಪಡುಬಿದ್ರಿ, ಅ.7: ರಾಜೀವ್ ಗಾಂಧಿ ರಾಷ್ಟ್ರೀಯ ರಾಜಕೀಯ ಶಿಕ್ಷಣ ಅಕಾಡೆಮಿಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಾರತ ತಿಳಿಯಲು ಬಯಸುತ್ತದೆ ಎನ್ನುವ 3 ನಿಮಿಷಗಳ ಕಿರುಚಿತ್ರ ಸ್ಫರ್ಧೆಯಲ್ಲಿ ಉಡುಪಿ ಜಿಲ್ಲೆಯ ಸೌರಭ ಆಚಾರ್ಯ ಮತ್ತು ಕಾರ್ತಿಕ್ ಶೆಟ್ಟಿ ಶಿರ್ವ ಅವರ ರೋಜ್ ಗಾರ್ ಎಂಬ ಕಿರುಚಿತ್ರ ಪ್ರಥಮ ಬಹುಮಾನ ಗೆದ್ದುಕೊಂಡಿದೆ.
ಶುಕ್ರವಾರ ಇಲ್ಲಿನ ತೆಂಕ ಏರ್ಮಾಳುನಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರು 1 ಲಕ್ಷರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಸೌರಭ್ ಆಚಾರ್ಯ ಅವರಿಗೆ ಪ್ರಧಾನ ಮಾಡಿದರು.
ರೊಸಲಿಯಾ ಉದ್ಯಾವರ ಅವರು ದ್ವಿತೀಯ ಬಹುಮಾನ 50,000 ರು., ತುಮಕೂರಿನ ವಿಭಾ ಅವರು ತೃತೀಯ ಸ್ಥಾನ 25,000 ರು. ಮತ್ತು ಸಾಗರದ ಮಂಜುನಾಥ ಎಚ್.ಎಸ್. ಮತ್ತು ಶೃಂಗೇರಿಯ ದರ್ಶಿನಿ ಅವರು ಕ್ರಮವಾಗಿ ನಾಲ್ಕನೇ ಮತ್ತ ಐದನೇ ಬಹುಮಾನಗಳನ್ನು ಪಡೆದುಕೊಂಡರು.
ರಾಷ್ಟ್ರಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ದೇಶದಾದ್ಯಂತದಿಂದ 300ಕ್ಕೂ ಹೆಚ್ಚು ಕಿರುಚಿತ್ರಗಳು ಭಾಗವಹಿಸಿದ್ದಾರೆ. ಅವರಲ್ಲಿ ಪ್ರತಿ ರಾಜ್ಯದ ಮಟ್ಟದಲ್ಲಿಯೂ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ನಮ್ಮ ರಾಜ್ಯದ ಸ್ಪರ್ಧೆಯ ಬಹುಮಾನ ಶುಕ್ರವಾರ ನಡೆಯಿತು.
ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಆಸ್ಕರ್ ಫೆರ್ನಾಂಡೀಸ್ ಅವರು ಮಾತನಾಡುತತಾ, ರಾಜೀವ ಗಾಂಧಿ ರಾಷ್ಟ್ರೀಯ ರಾಜಕೀಯ ಶಿಕ್ಷಣ ಅಕಾಡೆಮಿ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಈ ಸಣ್ಣ ಪ್ರಯತ್ನದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಅಕಾಡೆಮಿ ಯಶಸ್ವಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಏರ್ಮಾಳು ಪಂಚಾಯಿತ್ ಅಧ್ಯಕ್ಷೆ ಅರುಣಾ ಕುಮಾರಿ, ಯು.ಡಿ.ಸಿ.ಸಿ. ಕಾರ್ಯದರ್ಶಿ ಎ.ಹರೀಶ್ ಕಿಣಿ ಹಾಗೂ ಇತರ ಕಾಂಗ್ರಸ್ ಮುಖಂಡರು ಉಪಸ್ಥಿತರಿದ್ದರು.
Discussion about this post