ಭಾನುವಾರ ಉಡುಪಿ ಗಣೇಶೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ಜಲವಿವಾದ ಈಗ ನ್ಯಾಯಾಧೀಕರಣದಲ್ಲಿದೆ, ಅಲ್ಲದೇ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾರ ಮಾತನ್ನೂ ಕೇಳುವವರಲ್ಲ, ರಾಜ್ಯದ ನೀರಾವರಿ ಸಚಿವರ ನಡವಳಿಕೆಯೇ ಸರಿ ಇಲ್ಲ, ಇನ್ನು ಅತ್ತ ತಮಿಳುನಾಡಿನ ಮುಖ್ಯಮಂತ್ತಿ ಕೂಡ ಬಹಳ ಹಠದ ಹೆಂಗಸು, ಆದ್ದರಿಂದ ಪ್ರಧಾನಿ ಅವರು ಮಧ್ಯ ಪ್ರವೇಶಿಸಿ ರಾಜಿ ಮಾಡಿ ಪ್ರಯೋಜನ ಇಲ್ಲ ಎಂದವರು ಹೇಳಿದರು.
ಈ ವಿವಾದವನ್ನು ಬಗೆಹರಿಸುವುದಕ್ಕೆ ರಾಜ್ಯ ಸರ್ಕಾರ ಸರಿಯಾದ ತಂತ್ರವನ್ನು ಅನುಸರಿಸಿರಲಿಲ್ಲ, ನ್ಯಾಯಾಧೀಕರಣವೇ ರಾಜ್ಯದ ಜನತೆಯ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಹೇಳಿದೆ. ಆದರೂ ಈ ವಿಚಾರದಲ್ಲಿ ರಾಜ್ಯಕ್ಕೆ ತೊಂದರೆಯಾಗಿದೆ.
ಕೃಷ್ಣರಾಜ ಸಾಗರ ಜಲಾಶಯಕ್ಕೆ ತಜ್ಞರ ತಂಡ ಹೋಗಿ ವರದಿ ಕೊಡುವವರೆಗೂ ತಮಿಳುನಾಡಿಗೆ ಇನ್ನು ನೀರು ಬಿಡುವುದು ಬೇಡ ಎಂದಭಿಪ್ರಾಯಪಟ್ಟ ಡಿ.ವಿ.ಎಸ್., ರಾಜ್ಯಪರ ವಕೀಲ ಪಾಲಿ ನಾರಿಮನ್ ಬಗ್ಗೆ ಅನಗತ್ಯ ಸಂಶಯ ಬೇಡ, ಅವರೊಬ್ಬ ಅದ್ಭುತ ನ್ಯಾಯವಾದಿ, ಅವರು ರಾಜ್ಯದ ಹಿತವನ್ನು ಕಾಪಾಡುತ್ತಾರೆ ಎಂದು ಹೇಳಿದರು.
ಬಿ.ಜೆ.ಪಿ. ಜಟಾಪಟಿ ಸತ್ಯ
ರಾಜ್ಯದ ಬಿ.ಜೆ.ಪಿ.ನಾಯಕರಾಗ ಯಡಿಯೂರಪ್ಪ ಮತ್ತು ಈಶ್ಪರಪ್ಪ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಲಾರೆ, ಇದು ಪಕ್ಷದೊಳಗಿನ ಗೊಂದಲ, ದೊಡ್ಡ ಸಂಗತಿಯಲ್ಲ, ಮನೆಯೊಳಗೆ ಸರಿ ಮಾಡುತ್ತೇವೆ ಎಂದ, ಡಿ.ವಿ.ಎಸ್. ಈ ಜಟಾಪಟಿಯನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗಿದೆ, ಕೇಂದ್ರ ಸಂಘಟನಾ ಕಾರ್ಯದರ್ಶಿ ರಾಜ್ಯಕ್ಕೆ ಬಂದಿದ್ದು, 3 ದಿನ ಇಲ್ಲೇ ಇದ್ದು ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದರು.
Discussion about this post