No Result
View All Result
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?
English Articles

Winter Infections and Antibiotic Misuse: What Is Viral? What Is Dangerous?

by ಕಲ್ಪ ನ್ಯೂಸ್
January 12, 2026
0

Kalpa Media House  |  Bengaluru  | With a rise in cold, cough, fever, and respiratory infections during the winter season,...

Read moreDetails
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
ನಿಮಗೂ ಹೊಟ್ಟೆ ಹಿಂಸೆ ಇದೆಯಾ? ಹಾಗಾದ್ರೆ `ವಿಂಟರ್ ಪಾರ್ಟಿ ಸಿಂಡ್ರೋಮ್’ ಇರಬಹುದು | ಏನಿದು ಕಾಯಿಲೆ?

Winter Party Syndrome: Festive Bingeing Triggers 25% Spike in Stomach Troubles”

January 1, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

Major update of Shivamogga – Bengaluru Jana Shathabdi, Shivamogga – Chikkamagalur, Tumkur trains

December 27, 2025
ವಿಮಾನಗಳ ರದ್ದು | ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ | ಹಲವು ತುರ್ತು ಕ್ರಮ

Indian Railways Rationalises Fare Structure From Dec 26 | What charges for passengers

December 26, 2025
  • Advertise With Us
  • Grievances
  • About Us
  • Contact Us
Monday, January 12, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಕಾವೇರಿಗಾಗಿ ಒಂದಾದ ಕರುನಾಡು: ಯಶಸ್ವಿಯತ್ತ ರಾಜ್ಯ ಬಂದ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 9, 2016
in ಬೆಂಗಳೂರು ನಗರ
0
Share on FacebookShare on TwitterShare on WhatsApp
ಬೆಂಗಳೂರು, ಸೆ.9: ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಮುಖ ಮಾರುಕಟ್ಟೆಗಳು ಸ್ಥಬ್ಧವಾಗಿವೆ. ಇನ್ನು ಬಂದ್‌ಗೆ ಸರ್ಕಾರಿ ಸಾರಿಗೆ ಸಂಸ್ಥೆ ನೌಕರರು ಬೆಂಬಲ  ವ್ಯಕ್ತಪಡಿಸಿರುವುದರಿಂದ ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಬ್ದವಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರಸ್ಥರು ಬೆಂಬಲ ನೀಡಿದ್ದು, ಸ್ವಯಂ  ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ಬಂದ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರು, ಮೈಸೂರು, ಮಂಡ್ಯ ಭಾಗಶಃ ಬಂದ್
ಬೆಂಗಳೂರಿನ ಮೆಜೆಸ್ಟಿಕ್‌ನ ಸುತ್ತಮುತ್ತ ಪ್ರತಿಭಟನಾಕಾರರು ವಾಹನ ಸವಾರರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ. ಬಸ್, ಮೆಟ್ರೋ, ವಾಹನ ಸಂಚಾರ ಇಲ್ಲದ ಪರಿಣಾಮ ಉದ್ಯಾನನಗರಿ ಬಿಕೋ ಎನ್ನುತ್ತಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್ ಆಗಿದೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ನಿರತ ಟೆಕ್ಕಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ನಂತರ ಬಲವಂತವಾಗಿ ಕಚೇರಿ ಬಂದ್ ಮಾಡಿಸಲಾಯಿತು. ಏರ್ ಪೋರ್ಟ್ ಕ್ಯಾಬ್, ಟೂರಿಸ್ಟ್ ವಾಹನ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಚಾರ ಬಂದ್ ಆಗಿದ್ದು, ತಮಿಳು ೫೩ ಚಾನೆಲ್‌ಗಳನ್ನು ಕೇಬಲ್ ಆಪರೇಟರ್ಸ್‌ ಬಂದ್ ಮಾಡಿದ್ದಾರೆ.
ಇನ್ನು ಮೈಸೂರು ಹಾಗೂ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು, ಬಂದ್ ಯಶಸ್ವಿಯಾಗುತ್ತಿದೆ. ಮೈಸೂರಿನಲ್ಲಿ ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿತ್ತು. ಪ್ರಮುಖ ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಬೆಂಗಳೂರು-ಮಂಡ್ಯ-  ಮೈಸೂರು ಹೆದ್ದಾರಿ ಬಹುತೇಕ ಸ್ಥಬ್ಧವಾಗಿದ್ದು, ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಬದಲಿ ಮಾರ್ಗದ ಮೊರೆ ಹೋಗುತ್ತಿದ್ದಾರೆ. ಇನ್ನು ಅಲ್ಲಲ್ಲಿ  ವಾಹನಗಳಿಗೆ ಬೆಂಕಿ ಹಚ್ಚುವ, ರಸ್ತೆ ತಡೆ ಉಂಟು ಮಾಡಿ ಸಂಚಾರಕ್ಕೆ ಅಡಚಣೆ ಮಾಡುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ.
ಮಂಡ್ಯದಲ್ಲಿ ಇಂದು ಕಾವೆರಿ ಹೋರಾಟವನ್ನು ಭಿನ್ನ ವಿಭಿನ್ನವಾಗಿ ನಡೆಸಲಾಗುತ್ತಿದ್ದು, ಸಂಘಟನೆಯೊಂದು ಸಿದ್ಧರಾಮಯಯ್ಯ ಕುತ್ತಿಗೆಗೆ ಜಯಲಲಿತಾ ತಾಳಿ ಕಟ್ಟುತ್ತಿರುವ ಪೋಸ್ಟರ್ ಹಿಡಿದು ಪ್ರತಿಭಟಿಸಿದ್ದಾರೆ.
ಕಾವೇರಿಗೆ ಉತ್ತರ ಕರ್ನಾಟಕದ ಬೆಂಬಲ
ಕನ್ನಡ ಪರ ಸಂಘಟನೆಗಳ ಹಾಗೂ ರೈತ ಪರ ಸಂಘಟನೆಗಳ ಕಾವೇರಿ ಪ್ರತಿಭಟನೆ ಇಡೀ ರಾಜ್ಯವನ್ನೇ ಸ್ಥಬ್ದಗೊಳಿಸಿದ್ದು, ಕಾವೇರಿಗಾಗಿ ಇದಕ್ಕೆ ಉತ್ತರ ಕರ್ನಾಟಕ ಕೂಡ ಕೈ  ಜೋಡಿಸಿದೆ.
ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಬಂದ್‌ಗೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಬೆಳಗಾವಿ, ಗುಲ್ಬರ್ಗಾ, ವಿಜಯಪುರ,  ಬಾಗಲಕೋಟೆ ಹಾಗೂ ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.
ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮಿಳುನಾಡು ಸರ್ಕಾರ ಹಾಗೂ ಸಿಎಂ ಜಯಲಲಿತಾ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಗುಲ್ಬರ್ಗಾ,  ವಿಜಯಪುರದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ಕನ್ನಡಪರ ಸಂಘಟನೆಗಳು ಟೈರ ಗೆ ಬೆಂಕಿ ಹಾಕುವ ಮೂಲಕ  ಆಕ್ರೋಶ ವ್ಯಕ್ತಪಡಿಸಿವೆ. ಬಳ್ಳಾರಿಯ ಬೈಪಾಸ್‌ರಸ್ತೆಯಲ್ಲಿ ಸಂಚರಿಸುತ್ತಿದ್ದ ತಮಿಳುನಾಡು ರಾಜ್ಯದ ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಹಲವು ಲಾರಿಗಳು  ಜಖಂಗೊಂಡಿವೆ. ಬಳ್ಳಾರಿಯಲ್ಲಿ ಪ್ರಮುಖವಾಗಿ ಮಂಗಳ ಮುಖಿಯರು ಪ್ರತಿಭಟನೆ ನಡೆಸುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ವಿಶೇಷವಾಗಿತ್ತು. ದಾವಣಗೆರೆಯಲ್ಲೂ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗದೆಗದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಆದರೆ ಬೀದರ್, ರಾಯಚೂರು, ಚಿತ್ರದುರ್ಗದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನಜೀವನ ಎಂದಿನಂತೆ ಸಾಗಿದೆ. ಈ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಅಂಗಡಿ pixlr_20160909113549296 ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವಹಿವಾಟಿನಲ್ಲಿ ತೊಡಗಿದ್ದಾರೆ.
ಚಿತ್ರೋದ್ಯಮದ ಬೆಂಬಲ
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮವೂ ಸಹ ಬೆಂಬಲ ವ್ಯಕ್ತಪಡಿಸಿದೆ.
ಶಿವರಾಜ್ ಕುಮಾರ್, ದೇವರಾಜ್, ಉಪೇಂದ್ರ, ಲೀಲಾವತಿ, ಶರಣ್, ಭಾರತಿ ಮೊದಲಾದ ಹಲವಾರು ಚಿತ್ರನಟರು ಶಿವಾನಂದ ಸರ್ಕಲ್ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದ್ದಾರೆ.
Share196Tweet123Send
Previous Post

ಜಯಮ್ಮನಿಗೆ ಇನ್ನೂ 61 ಟಿಎಂಸಿ ನೀರು ಬೇಕಂತೆ: ಮತ್ತೆ ಕ್ಯಾತೆ ತೆಗೆದ ‘ಅಮ್ಮಾ’

Next Post

ಬಂದ್ ಟೀಕಿಸಿ ಕನ್ನಡಿಗರ ಕಿಡಿಗೆ ಗುರಿಯಾದ ಕಿರಣ್ ಮಜೂಂದಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬಂದ್ ಟೀಕಿಸಿ ಕನ್ನಡಿಗರ ಕಿಡಿಗೆ ಗುರಿಯಾದ ಕಿರಣ್ ಮಜೂಂದಾರ್

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

January 10, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

ಸಂಕ್ರಾಂತಿ ಹಬ್ಬ: ಮೈಸೂರು-ಬೆಳಗಾವಿ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

January 9, 2026
ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

January 12, 2026
ಓಂ ಶಕ್ತಿ ದೇವಸ್ಥಾನಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವಂತೆ ಮನವಿ

ಓಂ ಶಕ್ತಿ ದೇವಸ್ಥಾನಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವಂತೆ ಮನವಿ

January 12, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಲುಕ್‍ಮಾನ್: ಸುರೇಶ್ ಬಾಬು

ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಲುಕ್‍ಮಾನ್: ಸುರೇಶ್ ಬಾಬು

January 12, 2026
ಶಾಲಾ ಜಮೀನು ವಶಪಡಿಸಿಕೊಳ್ಳಲು ವಿಶೇಷ ಮಸೂದೆ ಖಂಡನೀಯ: ಕಲ್ಲೂರು ಮೇಘರಾಜ್

ಶಾಲಾ ಜಮೀನು ವಶಪಡಿಸಿಕೊಳ್ಳಲು ವಿಶೇಷ ಮಸೂದೆ ಖಂಡನೀಯ: ಕಲ್ಲೂರು ಮೇಘರಾಜ್

January 12, 2026
‘ವಿಬಿ-ಜಿ ರಾಮ್‍ಜಿ’ ಯೋಜನೆಗೆ ಕಾಂಗ್ರೆಸ್ ವಿರೋಧ | ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಬಿವೈಆರ್

‘ವಿಬಿ-ಜಿ ರಾಮ್‍ಜಿ’ ಯೋಜನೆಗೆ ಕಾಂಗ್ರೆಸ್ ವಿರೋಧ | ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: ಬಿವೈಆರ್

January 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL