ಯಾದಗಿರಿ, ಸೆ.9: ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಜಯಾ ಕನರ್ಾಟಕ ಸಂಘಟನೆ ಕಾರ್ಯಕರ್ತರು ಶಾಸ್ತ್ರೀ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರಗೆ ವಿನೂತನ ಉರಳು ಸೇವೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ಬರಪರಿ ಸ್ಥಿತಿ ಅನುಭವಿಸುತ್ತಿರುವ ರೈತರು , ಸರಿಯಾದ ಬೆಳೆ ಬೆಳೆಯದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಆದರೆ ಕರ್ನಾಟಕ ಸರ್ಕಾರ ಕಣ್ಣಾಮುಚ್ಚೆ ಆಟ ಆಡುತ್ತಿದ್ದಾರೆ, ಆದಕಾರಣ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿದರು.
ರಾಷ್ಟ್ರಪತಿಗಳ ಮದ್ಯಂತರ ವಹಿಸಿ ಮತ್ತೊಮ್ಮೆ ಪರಿಶಿಲಿಸಿ, ಕರ್ನಾಟಕ ಜನತೆಗೆ ನ್ಯಾಯ ಒದಗಿಸಬೇಕು, ಒಂದು ವೇಳೆ ನಿಷ್ಕಾಳಜಿ ವಹಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದಂತಹ ಉಗ್ರ ಹೋರಾಟ ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಿದರು.
ಜಯಕರ್ನಾಟಕ ಜಿಲ್ಲಾದ್ಯಕ್ಷ ವೆಂಕಟೇಶ ರೆಡ್ಡಿ ತುಳೇರ, ಮುಖಂಡರಾದ ಬಿ.ಎನ್.ವಿಶ್ವನಾಥನಾಯಕ, ವಿಜಯಕುಮಾರ ಮಗ್ದಂಪೂರ, ಫ್ರಭುಗೌಡ ಸುರಪುರ, ವಿರೇಶ ಹಿರೇಮಠ, ನರೇಶ, ಹಣಮಂತ ಹತ್ತಿಕುಣಿ, ಮಂಜು ನಾರಾಯಣಪೂರ, ಬಸವರಾಜ ಎನ್, ಶರಣು ಹುಲಕಲ್, ಶ್ರೀಕಾಂತ ಕುಂಬಾರ, ನಾಗು ತಾಂಡೂರಕರ್, ಸೋಮು ಪೂಜಾರಿ, ತಿಮ್ಮ ಬಾಚವಾರ, ಸೋಹೆಬ್, ಭೀಮು ಪಸ್ಪೂಲ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡರು.
Discussion about this post