Read - < 1 minute
ಬೆಂಗಳೂರು, ಸೆ.15: 1891 ರಲ್ಲಿ ಮಾಡಿಕೊಂಡ ಒಪ್ಪಂದ ಸೇರಿದಂತೆ ಇಲ್ಲಿಯವರೆಗೆ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಹಿಂದೆಲ್ಲಾ ರಾಜ್ಯದ ನೆಲ ಜಲ ಭಾಷೆಯ ವಿಷಯ ಬಂದಾಗ ನಮ್ಮ ರಾಜ್ಯದಲ್ಲಿ ಒಡಕು ಧ್ವನಿ ಇರುತ್ತಿರಲಿಲ್ಲ. ಸರ್ಕಾರದ ನಿಲುವನ್ನು ಎಲ್ಲ ಪಕ್ಷಗಳು ಒಪ್ಪಿಕೊಂಡು, ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ, ಈಗ ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಕಾರಣಕ್ಕೆ ಸರ್ಕಾರದ ನಿಲುವು ವಿರೋಧಿಸುತ್ತಿದ್ದಾರೆ ಎಂದು ವಿ ಎಸ್ ಉಗ್ರಪ್ಪ ಹೇಳಿದ್ದಾರೆ.
ತಮ್ಮ ಒಡಕಿನಿಂದಾಗಿ ವಿರೋಧ ಪಕ್ಷಗಳ ಭಿನ್ನ ಧ್ವನಿಯಿಂದಾಗಿ ತಮಿಳುನಾಡಿನ ಎದುರು ನಗೆಪಾಟಲಿಗೆ ಈಡಾಗುವಂತಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಇದನ್ನು ರಾಜಕೀಯ ದಾಳವಾಗಿ ಬಳಸುತ್ತಿದೆ. ಪ್ರಸಕ್ತ ನಮ್ಮಲಿ 30 ಟಿಎಂಸಿಗಿಂತ ಕಡಿಮೆ ನೀರಿದೆ. ಮೆಟ್ಟೂರಿನಲ್ಲಿ 42 ಟಿಎಂಸಿಗಿಂತ ಹೆಚ್ಚು ನೀರಿನ ಸಂಗ್ರಹವಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಮಧ್ಯ ಪ್ರವೇಶ ಮಾಡಬೇಕು. ಹಿಂದೆ ಅಂತಾರಾಜ್ಯ ನದಿ ವಿವಾದಗಳಲ್ಲಿ ಪ್ರಧಾನಿ ಮಧ್ಯ ಪ್ರವೇಶ ಮಾಡಿದ ಉದಾಹರಣೆಗಳಿವೆ ಎಂದರು.
ಕಾವೇರಿ ನ್ಯಾಯಮಂಡಳಿ ತೀರ್ಪಿನಲ್ಲಿ ಯಾವ ವರ್ಷದಲ್ಲಿ 740 ಟಿಎಂಸಿ ಲಭ್ಯವಾಗುತ್ತದೋ ಆ ವರ್ಷದಲ್ಲಿ ಮಾತ್ರ 190 ಟಿಎಂಸಿ ನೀರು ಬಿಡಬೇಕು. ನೀರಿನ ಲಭ್ಯತೆ ವ್ಯತ್ಯಾಸವಾದ ವರ್ಷಗಳಲ್ಲಿ ನ್ಯಾಯಮಂಡಳಿ ಇದನ್ನು ಬದಲಾವಣೆ ಮಾಡಬಹುದು ಎಂದು ಉಲ್ಲೇಖಿಸಲಾಗಿದೆ. ಬಿಜೆಪಿಯವರು ಈಗ ರಾಜ್ಯದ ಹಿತಕ್ಮೆ ವಿರುದ್ದವಾಗಿ ವರ್ತಿಸುತ್ತಿದ್ದಾರೆ.ಅವರೇ ಪ್ರಧಾನಿಯವರ ಮೇಲೆ ಒತ್ತಡ ತರಬೇಕು.ಅಗತ್ಯವಾದಲ್ಲಿ ಬಿಜೆಪಿ ಸಂಸದರು, ಸಚಿವರು ರಾಜೀನಾಮೆಗೆ ಸಿದ್ದರಾಗಬೇಕು ಎಂದು ಒತ್ತಾಯಿಸಿದರು.
Discussion about this post