ಶ್ರೀನಗರ, ಸೆ.2: ಸುಮಾರು 25ಕ್ಕೂ ಹೆಚ್ಚು ದಿನ ಗಲಭೆಯಿಂದ ಪೀಡಿತವಾಗಿದ್ದ ಕಣಿವೆ ರಾಜ್ಯದಲ್ಲಿ ಶಾಂತಿ ಮೂಡುತ್ತಿತ್ತು. ಆದರೆ, ಇಂದು ಪ್ರಾರ್ಥನೆ ವೇಳೆ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ಹಲವೆಡೆ ಮತ್ತೆ ಕರ್ಫ್ಯೂ ಜಾರಿಮಾಡಲಾಗಿದೆ.
ಇಂದು ಶುಕ್ರವಾರದ ಪ್ರಾರ್ಥನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಆದರೆ, ಈ ನಡುವೆಯೂ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಬುರ್ಹಾನ್ ವನಿ ಹತ್ಯೆ ಖಂಡಿಸಿ ೫೦ಕ್ಕೂ ಹೆಚ್ಚು ದಿನಗಳ ಕಾಲ ಹಿಂಸಾಚಾರ ನಡೆದಿತ್ತು. ಇಂದಿಗೂ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ಕೆಂಡದಂತೆಯೇ ವಾತಾವರಣ ಮುಂದುವರೆದಿದೆ.
ಅನಂತನಾಗ್, ಪುಲ್ವಾಮ, ಕುಲ್ಗಾಮ್, ಸೊಫಿಯನ್, ಬಾರಾಮುಲ್ಲಾ ಮತ್ತು ಪಟ್ಟನ್ ಪ್ರದೇಶಗಳಲ್ಲಿ ಈಗಾಗಲೇ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಬುರ್ಹಾನ್ ವನಿಯನ್ನು ಜುಲೈ೮ ರಂದು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬುರ್ಹಾನ್ ವನಿ ಹತ್ಯೆ ವಿರೋಧಿಸಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿದ್ದರು. ಅದರ ಪರಿಣಾಮ ಕಾಶ್ಮೀರದಲ್ಲಿ ಹಿಂಸಾಚಾರ ಆರಂಭಗೊಂಡಿತ್ತು. ಪರಿಣಾಮ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿತ್ತು.
ಇಸ್ಲಾಮಾಬಾದ್: ಪೇಶಾವರದಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಓರ್ವ ನಾಗರಿಕ ಮತ್ತು ಇಬ್ಬರು ಶಂಕಿತ ಉಗ್ರಗಾಮಿಗಳು ಹತರಾಗಿದ್ದಾರೆ.
ಇಂದು ಬೆಳಗ್ಗೆ ೬ ಗಂಟೆ ಸುಮಾರಿಗೆ ಪಾಕಿಸ್ಥಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ಕ್ರಿಶ್ಚಿಯನ್ ಕಾಲೊನಿ ಬಳಿ ಕಾನೂನು ಜಾರಿ ಸಿಬ್ಬಂದಿ ಮತ್ತು ಬಂದೂಕುಧಾರಿಗಳ ಮಧ್ಯೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.
Discussion about this post