ಶ್ರೀನಗರ, ಸೆ.4: ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು ಇಲ್ಲಿನ ಸೋಫಿಯಾನ್ ಜಿಲ್ಲಾಧಿಕಾರಿ ಕಚೇರಿ ಬಳಿ ಹಿಂಸಾಚಾರ ನಡೆದಿದ್ದು, ಘಟನೆಯಲ್ಲಿ 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗುಂಪಾಗಿ ಬಂದ ದುಷ್ಕರ್ಮಿ ಗಳು ಸ್ವತಂತ್ರ ಬೇಕು ಎಂದು ಘೋಷಣೆ ಕೂಗಿದ್ದಾರೆ. ಮಾತ್ರವಲ್ಲದೆ ಸ್ಥಳೀಯರು ನಮ್ಮೊಡನೆ ಕೈ ಜೋಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಈ ವೇಳೆ ಸೇನೆ ಮಧ್ಯ ಪ್ರವೇಶಿಸಿ ಪ್ರಶ್ನಿಸಿದೆ. ಇದರಿಂದ ಉದ್ರಿಕ್ತ ಗೊಂಡ ಗುಂಪು ಜಿಲ್ಲಾಧಿಕಾರಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಿಜಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾಣಿ ಹತ್ಯೆ ನಂತರ ಉಂಟಾದ ಘರ್ಷಣೆ 25 ಕ್ಕೂ ಹೆಚ್ಚು ದಿನ ನಡೆಯಿತು. ಉದ್ರಿಕ್ತ ದೇಶದ್ರೋಹಿಗಳ ಗುಂಪು ಇಲ್ಲಿನ ಪೊಲೀಸ್ ಠಾಣೆಗಳಿಗೂ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ.
Discussion about this post