No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
  • Advertise With Us
  • Grievances
  • About Us
  • Contact Us
Friday, July 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಜಕೀಯ

ಮುಖ್ಯಮಂತ್ರಿ ಕನಸಲ್ಲಿ ನವಜೋತ್ ಸಿಂಗ್ ಸಿಧು!

kalpa News by kalpa News
September 4, 2016
in ರಾಜಕೀಯ
0
Share on FacebookShare on TwitterShare on WhatsApp

ಪಂಜಾಬ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದೆ. ಇನ್ನೇನು ಐದು ತಿಂಗಳಲ್ಲಿ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅಲ್ಲಿನ ರಾಜಕೀಯದಲ್ಲಿ ಸಂಚಲನ ಉಂಟುಮಾಡುವಂತಹ ಹಾಗೂ ಆಢಳಿತಾರೂಢ ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ  ಇದು ಘಟಿಸಿದೆ. ಇತ್ತೀಚೆಗಷ್ಟೇ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು  ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದಾರೆ. ಅದರ ಹೆಸರು ಅವಾಜ್-ಇ- ಪಂಜಾಬ್.

ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ)ಯ ನೇತೃತ್ವವನ್ನು  ಬಿಜೆಪಿಗೆ ರಾಜೀನಾಮೆ ನೀಡಿ ಆಗಸ್ಟ್ ನಲ್ಲಿ ಹೊರಬಂದಿರುವ ಸಿಧು ವಹಿಸಿಕೊಳ್ಳುತ್ತಾರೆಂಬ ವದಂತಿ ಕೇಳಿಬಂದಿತ್ತು. ಅಷ್ಟೇ ಅಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುವುದೆಂಬ ಮಾತು ಹರಡಿತ್ತು. ಆದರೆ  ಎಎಪಿ  ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದಕ್ಕೊಪ್ಪದ  ಹಿನ್ನೆಲೆಯಲ್ಲಿ ಸಿಧು ಹೊಸ ಪಕ್ಷ ರಚಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ಸಿಧು ಅವರ ಅವಾಜ್-ಇ- ಪಂಜಾಬ್ ಎಂಬ ಹೆಸರಿನ ಈ ಪಕ್ಷ ಪಂಜಾಬ್ ನಲ್ಲಿ ಹೊಸ ಶಕೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಕಾಂಗ್ರೆಸ್ ಹೊರತುಪಡಿಸಿದರೆ ಪಂಜಾಬಿನಲ್ಲಿ ಅಕಾಲಿದಳವೇ ಪ್ರಮುಖ ಪಕ್ಷವಾಗಿದೆ. ಅದರೆ ಇದು ಸ್ವತಂತ್ರವಾಗಿ ಆಡಳಿತ ನಡೆಸುವ ಸ್ಥಿತಿಯಲ್ಲಿಲ್ಲದ ಕಾರಣ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕೇಂದ್ರ ಸರ್ಕಾರಕ್ಕೂ ಅಕಾಲಿದಳ ಬೆಂಬಲ ನೀಡಿದೆ. ಆದರೆ ಸಿಧು ಅಕಾಲಿದಳದ ಕಟ್ಟಾ ವಿರೋಧಿಯಾಗಿರುವುದು ಹೊಸ ಬೆಳವಣಿಗೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಸಿಧು ಜೊತೆ ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅಕಾಲಿದಳದ ಹಾಲಿ ಶಾಸಕ ಪರ್ಗತ್ ಸಿಂಗ್  ಮತ್ತು ಪಕ್ಷೇತರ ಸದಸ್ಯ ಬೇನ್ಸ್  ಕೈಜೋಡಿಸಿದ್ದಾರೆ. ಪರ್ಗತ್ ಅವರು ಪಕ್ಷದ ನಾಯಕತ್ವವನ್ನು ಟೀಕಿಸಿದ್ದಕ್ಕಾಗಿ ಇತ್ತೀಚೆಗಷ್ಟೇ ಅವರನ್ನು ಅಕಾಲಿದಳದಿಂದ ಅಮಾನತುಗೊಳಿಸಲಾಗಿತ್ತು. ಬೇನ್ಸ್ ಸಹ ಅಕಾಲಿದಳದಿಂದ ಟಿಕೆಟ್ ಸಿಗಲಿಲ್ಲ ಎಂದು ಅದರ ವಿರುದ್ದ ಸೆಡ್ಡು ಹೊಡೆದು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದವರು. ಈಗ ಹೊಸ ಪಕ್ಷ ಕಟ್ಟಿರುವ ಸಿಧು ಮುಂದಿನ ಚುನಾವಣೆಯಲ್ಲಿ ಎಎಪಿ ಜೊತೆ ಸೇರಿ ಸ್ಪರ್ಧಿಸಿ ಹೊಸ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಪಂಜಾಬ್ ನಲ್ಲಿ ನಡೆದ ಈ ನಾಟಕೀಯ ಬೆಳವಣಿಗೆಯಿಂದ ಅಲ್ಲಿನ ಸರ್ಕಾರ ಗಂಭೀರ ಚಿಂತನೆ ನಡೆಸುವಂತಾಗಿದೆ. ಅಕಾಲಿದಲ, ಕಾಂಗ್ರೆಸ್ ಮತ್ತು ಬಿಜೆಪಿ ಮೂರೇ ಪಕ್ಷಗಳು ಆ ರಾಜ್ಯದಲ್ಲಿವೆ.  ಈಗ ಎಎಪಿ ಮತ್ತು ಸಿಧು ಅವರ ಅವಾಜ್ -ಇ- ಪಂಜಾಬ್ ನಿಂದ ನಾಲ್ಕು ಪಕ್ಷಗಳು ಚುನಾವಣೆಯಲ್ಲಿ  ಸೆಣೆಸುವಂತಾಗಿದೆ.

10 ವರ್ಷಗಳಿಂದ ಆಡಳಿತಾರೂಢವಾಗಿರುವ ಅಕಾಲಿದಳದ ಬಗ್ಗೆ ಸಾಕಷ್ಟು ಭ್ರಮನಿರಸನ ಅಲ್ಲಿನ ಜನತೆಯಲ್ಲಿ ಮೂಡಿರುವುದು ಸತ್ಯ. ಇದರ ಲಾಭವನ್ನು  ಈ ಮೂವರು ನಾಯಕರು ಸದುಪಯೋಗಪಡಿಸಿಕೊಳ್ಳಲು ತಂತ್ರ ಹೆಣೆದಿದ್ದಾರೆ. ಅಲ್ಲಿನ ಪ್ರತಿಯೊಬ್ಬ ಮತದಾರನ ಅಚ್ಚುಮೆಚ್ಚಿನ ಕ್ರಿಕೆಟ್ ಮತ್ತು ಹಾಕಿ ಆಟಗಾರರಾದ ಸಿಧು ಮತ್ತು ಪರ್ಗತ್, ಎಎಪಿ ಜೊತೆಗೆ ಗೌಪ್ಯವಾಗಿಯೇ ವ್ಯವಹರಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸೀಟು ಹೊಂದಾಣಿಕೆ ಸಹಿತ ಹಲವು ವಿಚಾರಗಳು ಈಗಾಗಲೆ ಇತ್ಯರ್ಥವಾಗಿವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆ ಘೋಷಣೆ ಮುನ್ನವೇ ಸೂಕ್ತ ತಯಾರಿ ನಡೆಸುವುದು ಅವರ  ಮುಂದಿರುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ..

ಮತದಾರರಲ್ಲಿ ರಿಂಗಣಿಸುತ್ತಿರುವ ತನ್ನ ನೀತಿಗಳ ಬಗ್ಗೆ, ಕಾರ್ಯವೈಖರಿಗಳ ಬಗ್ಗೆ ಮೊದಲೇ ಅಕಾಲಿದಳ ಚಿಂತಿತವಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಎಎಪಿ ಸಹ ನಿದ್ದೆಗೆಡುವಂತೆ ಈ ಬೆಳವಣಿಗೆ ಮಾಡಿದೆ. ಕಾಂಗ್ರೆಸ್ ಸಾಕಷ್ಟು ನಿರೀಕ್ಷೆಗಳನ್ನು ಮುಂದಿನ ಚುನಾವಣೆ ಬಗ್ಗೆ ಹೊಂದಿತ್ತು. ಎಎಪಿ ಸಹ ಇದೇ ಆಶಾಭಾವನೆಯಲ್ಲಿತ್ತು. ಏಕೆಂದರೆ ಅಕಾಲಿದಳದ ಬಗ್ಗೆ ಇರುವ ನಕಾರಾತ್ಮಕ ಬೆಳವಣಿಗೆ ತನಗೆ ಅನುಕೂಲವಾಗಲಿದೆ ಎಂದೇ ಎಎಪಿ ಮತ್ತು ಕಾಂಗ್ರೆಸ್ ಭಾವಿಸಿದ್ದವು.

ಸಿಧು ಈ ಎಲ್ಲ ಅವಕಾಶಗಳನ್ನು ಈಗ ಗುಡಿಸಿಹಾಕುವುದು ನಿಶ್ಚಿತವಾಗಿದೆ. ಎಎಪಿ ತನ್ನನ್ನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂಧು ಘೋಷಿಸಲಿಲಲ್ಲ ಎಂಬ ಸಿಟ್ಟಿದೆ. ಅದನ್ನು ಚುನಾವನೆ ಮೂಲಕ ತೀರಿಸಿಕೊಳ್ಳುವರೇ ಅಥವಾ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವರೇ ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ.  ಕೆಲವು ಮಾಹಿತಿಗಳ ಪ್ರಕಾರ, ಪಂಜಾಬ್ ಎಎಪಿ ಮುಖ್ಯಸ್ಥ  ಹಿಮ್ಮತ್ ಸಿಂಗ್  ಜೊತೆ ಸಿಧು ಮಾತುಕತೆ ನಡೆಸಿದ್ದಾರೆ. ಮೈತ್ರಿ ಬಗ್ಗೆ ಒಪ್ಪಿಗೆ ಸಿಕ್ಕಿದೆ. ಈ ಮಧ್ಯೆ  ಎಎಪಿಯ ಪ್ರಮುಖನಾಗಿದ್ದ ಸುಖ್ ಸಿಂಗ್ ಅವರನ್ನು ಎಎಪಿ ವಜಾ ಮಾಡಿದ ಕಾರಣ ಪಕ್ಷ ತನ್ನ ಮೊದಲಿನ ಹೆಸರನ್ನು ಉಳಿಸಿಕೊಂಡಿಲ್ಲ.  ಈ ಪಕ್ಷದ ಬಂಡಾಯ ನಾಯಕರು ಮತ್ತು ಕಾರ್ಯಕರ್ತರು ಸಿಧು ಪಕ್ಷ ಸೇರುವುದು ನಿಶ್ಚಿತವಾಗಿದೆ. ಇದು ಆಪಕ್ಷದ ಮುಖಂಡ ಹಿಮ್ಮತ್ಗೆ ನಿದ್ದೆ ಬಾರದಂತೆ ಮಾಡಿದೆ. ಹೊರಬಂದ ಈ ಬಂಡಾಯಗಾರರು ತಮ್ಮದು ನೈಜ ಎಎಪಿ ಎಂದು ಹೇಳಿಕೊಳ್ಳುತ್ತಿದ್ದಾರೆ.  ಕೇಜ್ರಿವಾಲ್ ಸಹ ಸಿಧು ಜೊತೆ ಮಾತುಕತೆ ನಡೆಸಿದ್ದರಾದರೂ ಪರಿಣಾಮ ಬೀರಲಿಲ್ಲ. ಹೀಗಿರುವಾಗ ಸಿಧು ಅವರೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಬಹುದೇ ಎನ್ನುವ ಚಚೇ ರಾಜ್ಯದಲ್ಲಿ ನಡೆಯುತ್ತಿದೆ.

ನಾಲ್ಕನೆಯ ರಂಗವಾಗಿ ಹೊರಹೊಮ್ಮಿರುವ ಸಿಧು ಪಕ್ಷದಿಂದ ಕಾಂಗ್ರೆಸ್ ಗೆ ಹೆಚ್ಚು ಹಾನಿಯಾಗಲಿದೆ.  ಹಾಲಿ ಮುಖ್ಯಮಂತ್ರಿ ಬಾದಲ್ ಅವರ ವಿರುದ್ಧವಿರುವ ಮತಗಳನ್ನೆಲ್ಲ ತಾನು ಬಾಚಿಕೊಳ್ಳುವ ಆಸೆ ಕಾಂಗ್ರೆಸ್ ಗಿತ್ತು. ಆದರೆ ಎಎಪಿ ಸಹ ಇದಕ್ಕಾಗಿ ತನ್ನ ಸಾಹಸವನ್ನು ಮುಂದುವರೆಸಿತ್ತು. ಆ ಪಕ್ಷವು ಇಬ್ಭಾಗವಾಗಿದ್ದರಿಂದ ಕಾಂಗ್ರೆಸ್ ಮತ್ತೆ ಕನಸು ಕಂಡಿತ್ತು. ಆದರೆ ಸಿಧು ಪಕ್ಷ ಈ ಎಲ್ಲ ಕನಸುಗಳಿಗೆ ತಡೆ ಹಾಕಿದೆ. ಮತ್ತೆ ಅಕಾಲಿದಳವೇ ನೇರ ಪೈಪೋಟಿ  ನೀಡಬಹುದು. ಸಿಧು ಪಕ್ಷ ಈ ಮೂರೂ ಪಕ್ಷಗಳ ಮತವನ್ನು ಕಸಿದುಕೊಂಡು ಮುನ್ನುಗ್ಗಬಹುದೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರವಿಲ್ಲ.

ವ್ಯಕ್ತಿಯ ಜನಪ್ರಿಯತೆ ಬೇರೆ. ರಾಜಕೀಯ ಬೇರೆ.  ಮತ ಹಾಕುವವರು ಲಾಭ-ನಷ್ಟಗಳನ್ನು ಗಮನಿಸುತ್ತಾರೆ. ದೇಸದ ಹಲವು ರಾಜ್ಯಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರು, ರಾಜಕಿಯ ಮಾಡಿದ್ದು ಕಣ್ಣೆದುರಿರುವಾಗ ಸುಲಭವಾಗಿ ಸಿಧುವನ್ನು ಅಲ್ಲಿನ ಮತದಾರ ಮೇಲಕ್ಕೆತ್ತುತ್ತಾನೆಯೇ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು.

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಣ್ಣ ಬೇಡ ಮಣ್ಣೇ ಸಾಕು!

Next Post

ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

kalpa News

kalpa News

Next Post

ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

Leave a Reply Cancel reply

Your email address will not be published. Required fields are marked *

No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL