Read - < 1 minute
ಶ್ರೀನಗರ:ಅ-10:ಜಮ್ಮು-ಕಾಶ್ಮೀರದ ಪಾಂಪೋರ್ ನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯ ಕಟ್ಟಡವೊಂದಕ್ಕೆ ನುಗ್ಗಿ ಭಯೋತ್ಪಾದಕರು ದಾಳಿ ನಡೆಸಿದ್ದು ಗುಂಡಿನ ಸುರಿಮಳೆಗೈದಿದ್ದಾರೆ.
ಶ್ರೀನಗರದಿಂದ 10 ಕಿಲೋ ಮೀಟರ್ ದೂರದಲ್ಲಿನ ಉದ್ಯಮ ಅಭಿವೃದ್ಧಿ ಸಂಸ್ಥೆಯ ಒಳಗೆ ನಸುಕಿನ ಜಾವ 6.30ರ ಸುಮಾರಿಗೆ ನುಗ್ಗಿದ ಭಯೋತ್ಪಾದಕರು ಭದ್ರತಾ ಪಡೆಯವರ ಗಮನ ಸೆಳೆಯಲು ಗುಂಡಿನ ಸುರಿಮಳೆಗೈದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಕಟ್ಟಡವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭದ್ರತಾಪಡೆ ಹಾಗೂ ಭಯೋತ್ಪಾದಕರ ನಡುವಿನ ಘರ್ಷಣೆಯಲ್ಲಿ ಓರ್ವ ಯೋಧನಿಗೆ ಗಾಯವಾಗಿದೆ.
ಭಯೋತ್ಪಾದಕರು ಕಟ್ಟಡದೊಳಗೆ ಸೇರಿಕೊಂಡಿದ್ದು, ಉಗ್ರರು ತಪ್ಪಿಸಿಕೊಂಡು ಹೋಗಬಹುದಾದ ಹಾದಿಗಳನ್ನೆಲ್ಲ ಮುಚ್ಚಲಾಗಿದೆ. ಉಗ್ರರವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ.
ಕಳೆದ ಫೆಬ್ರವರಿಯಲ್ಲಿ ಇದೇ ಕಟ್ಟಡದಲ್ಲಿ 48 ಗಂಟೆಗಳ ಸತತ ಗುಂಡಿನ ಚಕಮಕಿ ನಡೆದಿತ್ತು. ಅದರಲ್ಲಿ ಏಳು ನಾಗರಿಕರು, ಮೂವರು ಅರೆ ಸೇನಾ ಸಿಬ್ಬಂದಿ ಮತ್ತು ಮೂವರು ಭಯೋತ್ಪಾದಕರು ಮೃತಪಟ್ಟಿದ್ದರು.
Discussion about this post