ಬೆಂಗಳೂರು: ಸೆ:18: ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಕ್ಲೀನ್ಚಿಟ್ ಪಡೆದ ಕೆ.ಜೆ.ಜಾರ್ಜ್ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷದ ಒಳಗೂ ಮತ್ತು ಹೊರಗು ಕಾವೇರಿದ ವಾತಾವರಣ ನಿರ್ಮಾಣವಾಗುತ್ತಿದೆ.
ಒಂದೆಡೆ ಕಾವೇರಿ ವಿವಾದದಿಂದ ಭುಗಿಲೆದ್ದಿರುವ ಸಂಘರ್ಷವೇ ತಣ್ಣಗಾಗದಿರುವಾಗ ಕೆ.ಜೆ.ಜಾರ್ಜ್ ಅವರ ಪಟ್ಟಾಭೀಷೇಕ ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ವೇದಿಕೆ ಒದಗಿಸಿಕೊಟ್ಟಿದೆ.
ಹೈಕಮಾಂಡ್ ಕಟ್ಟಪ್ಪಣೆಯ ಮೇರೆಗೆ ಕೆ.ಜೆ.ಜಾರ್ಜ್‌ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಒಂದು ಹುದ್ದೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ರಾಜೀನಾಮೆ ನೀಡಿ ಹೊರ ಹೋಗಿದ್ದ ಕೆ.ಜೆ.ಜಾರ್ಜ್ ಅವರನ್ನು ಅಷ್ಟೇ ಗೌರವಯುತವಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ತಯಾರಿ ನಡೆಯುತ್ತಿದೆ. ಆದರೆ ಇದಕ್ಕೆ ವಿರೋಧ ಪಕ್ಷಗಳಷ್ಟೇ ವ್ಯಾಪಕ ವಿರೋಧ ಕಾಂಗ್ರೆಸ್ ಒಳಾಂಗಣದಲ್ಲೂ ಕೇಳಿ ಬಂದಿದೆ.
ಸಿಐಡಿ ತನಿಖೆಯ ಬಗ್ಗೆ ಶಂಕೆ ವ್ಯಕ್ತವಾಗಿರುವಾಗ, ಆ ಸಂಸ್ಥೆ ನೀಡಿದ ಕ್ಲೀನ್ಚಿಟ್ನ್ನು ಮುಂದಿಟ್ಟುಕೊಂಡು ಜಾಜರ್್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ. ಈಗಾಗಲೇ ಸಂತೋಷ್ ಲಾಡ್ ಪ್ರಕರಣದಲ್ಲಿ ರಾಜ್ಯ ಸಕರ್ಾರ ಗಣಿಲಾಭಿಗೆ ಮಣಿದಿದೆ ಎಂಬ ಆರೋಪ ಈಗಾಗಲೇ ಕೇಳಿ ಬಂದಿದೆ. ಈಗ ಕೆ.ಜೆ.ಜಾರ್ಜ್ ಅವರನ್ನು ಮತ್ತೆ ಸೇರಿಸಿಕೊಂಡರೆ ರಿಯಲ್ ಎಸ್ಟೇಟ್ ಲಾಭಿಗೆ ಸಕರ್ಾರ ಮಣಿದಿದೆ ಎಂಬ ಟೀಕೆಗೂ ಗುರಿಯಾಗಬೇಕಾಗುತ್ತದೆ. ಮೇಲಾಗಿ ಇತ್ತೀಚೆಗೆ ಪಕ್ಷ ಸಂಘಟನೆಯಲ್ಲಿ ಕೆ.ಜೆ.ಜಾರ್ಜ್ ಅವರು ಅಷ್ಟು ಪ್ರಭಾವಿಯಾಗಿಲ್ಲ ಎಂಬ ಅಕ್ಷೇಪಗಳು ಕೇಳಿ ಬಂದಿವೆ.
ಕೆ.ಜೆ.ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಕೊಳ್ಳಿ ಎಂದು ಹೈಕಮಾಂಡ್ ನಾಯಕರೆ ಫಮರ್ಾನು ಹೊರಡಿಸಿರುವುದರಿಂದ ರಾಜ್ಯ ನಾಯಕರು ಇದರ ವಿರುದ್ಧ ಧ್ವನಿ ಎತ್ತುವ ಧೈರ್ಯವಿಲ್ಲದೆ ಒಳಗೊಳಗೆ ಕುದಿಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೂ ಕೆಲ ನಾಯಕರು ಮುಂದಾಗಿದ್ದಾರೆ. ಐದಾರು ಬಾರಿ ಆಯ್ಕೆಯಾಗಿರುವ ಹಿರಿಯ ನಾಯಕರಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಉತ್ಸಾಹಿಗಳಿದ್ದಾರೆ. ಕಳಂಕ ರಹಿತರ ಸಾಲೇ ಸಂಪುಟ ಸೇರ್ಪಡೆಯಾಗುವವರ ಪಟ್ಟಿಯಲ್ಲಿದೆ. ಅವರನ್ನೆಲ್ಲಾ ಕಡೆಗಣಿಸಿ ಕೆ.ಜೆ.ಜಾರ್ಜ್ ಅವರಿಗೆ ಮಣೆ ಹಾಕುವ ಅಗತ್ಯ ಏನಿದೆ ಎಂಬ ಪ್ರಶ್ನೆಗಳು ಕಾಂಗ್ರೆಸ್ ಒಳ ವಲಯದಲ್ಲಿ ಹರಿದಾಡುತ್ತಿವೆ.
ಒಳಗೆ ವಿರೋಧ ಇರುವುದು ಒಂದು ಕಡೆಯಾದರೆ ವಿರೋಧ ಪಕ್ಷಗಳು ಬಿ-ರಿಪೋಟರ್್ ವಿರುದ್ಧ ಬೀದಿಗಿಳಿಯುವ ತಯಾರಿಯಲ್ಲಿವೆ. ಬಿಜೆಪಿ ಈಗಾಗಲೇ ಬಿ-ವರದಿಯನ್ನು ತಿರಸ್ಕರಿಸಿದೆ. ಗಣಪತಿ ಅವರ ಪತ್ನಿ ಪಾವನಾ ತಮಗೆ ಅನ್ಯಾಯವಾಗಿದೆ. ಈಗ ನಮ್ಮ ಜೊತೆ ಯಾರು ಇಲ್ಲ ಎಂದು ಭಾವನಾತ್ಮಕ ಹೇಳಿಕೆ ನೀಡಿರುವುದು ಜನರ ಮನ ಕಲಕಿದೆ.
ಇಷ್ಟೆಲ್ಲಾ ಕಿಚ್ಚಿನ ನಡುವೆ ಕೆ.ಜೆ.ಜಾರ್ಜ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡು ಸಾಧಿಸುವುದೇನು ಎಂಬ ಪ್ರಶ್ನೆ ಮೂಡಿದೆ.
ಪರ ವಿರೋಧ ಏನೇ ಇದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.22ಕ್ಕೆ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಜೊತೆ ಚಚರ್ಿಸಿ ಮಾರನೆಯ ದಿನವೇ ಸಂಪುಟ ವಿಸ್ತರಣೆ ಮಾಡಿ ಕೆ.ಜೆ.ಜಾರ್ಜ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ತಯಾರಿ ನಡೆಸಿದ್ದಾರೆ.
Discussion about this post