ಬೆಂಗಳೂರು: ಸೆ:24: ಬಹಳ ದಿನಗಳಿಂದ ರಾಜ್ಯದಲ್ಲಿ ಉದ್ಭವಿಸಿದ್ದ ಕಾವೇರಿ ವಿವಾದದಿಂದ ಬಿಡುವಿಲ್ಲದೆ ದುಡಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆ ಜೆ ಜಾರ್ಜ್ ಅವರ ಜತೆ ಖಾಸಗಿ ಕಾರಿನಲ್ಲಿ ರಹಸ್ಯ ಸ್ಥಳಕ್ಕೆ ತೆರಳಿ ಕುತೂಹಲ ಮೂಡಿಸಿದರು.
ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಕೆಪಿಸಿಸಿ ಕಾಯರ್ಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೆ ಜೆ ಜಾರ್ಜ್, ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್ ಅಹಮ್ಮದ್, ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂತರ್ಿ ಅವರೊಂದಿಗೆ ಚಚರ್ೆ ನಡೆಸಿದ ಸಿದ್ದರಾಮಯ್ಯ ಅವರು ಸುಮಾರು 12.15ರ ವೇಳೆಗೆ ಕಾವೇರಿಯಿಂದ ಕೆ ಜೆ ಜಾರ್ಜ್ ಅವರ ಮಸರ್ಿಡಿಸ್ ಬೆಂಜ್ ಕಾರಿನಲ್ಲಿ ತೆರಳಿದರು.
ಈ ಸಂದರ್ಭದಲ್ಲಿ ದಿನನಿತ್ಯ ಮುಖ್ಯಮಂತ್ರಿಗಳಿಗೆ ಒದಗಿಸಲಾಗುತ್ತಿದ್ದ ಭದ್ರತೆ ಬದಲಾಗಿ ಕೇವಲ ನಾಲ್ಕು ಗನ್ಮ್ಯಾನ್ಗಳನ್ನು ಒಳಗೊಂಡ ಸ್ಕಾಪರ್ಿಯೋ ಕಾರು ಮುಖ್ಯಮಂತ್ರಿ ಅವರು ಪ್ರಯಾಣಿಸುತ್ತಿದ್ದ ಖಾಸಗಿ ಕಾರನ್ನು ಹಿಂಬಾಲಿಸಿತು.
ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕ ಸಂಬಂಧ ಚಚರ್ೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಉನ್ನತ ಮೂಲಗಳ ಪ್ರಕಾರ, ಕೆ ಜೆ ಜಾರ್ಜ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ತೆರಳಿದ್ದಾರೆ ಎನ್ನಲಾಜಗಿದೆ.
ಒಟ್ಟಿನಲ್ಲಿ ಖಾಸಗಿ ಕಾರಿನಲ್ಲಿ ಮುಖ್ಯಮಂತ್ರಿಗಳು ಪ್ರಯಾಣ ಬೆಳೆಸಿದ್ದು ಕುತೂಹಲಕ್ಕೆ ಕಾರಣವಾಯಿತು.
Discussion about this post