Read - < 1 minute
ನವದೆಹಲಿ, ಅ.28 ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರ, ಶೆ.೨ರಷ್ಟು ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ೨೦೧೬ರ ಜುಲೈನಿಂದಲೇ ಅನ್ವಯಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ತುಟ್ಟಿ ಭತ್ಯೆ ಏರಿಕೆಯಿಂದ ಸರಕಾರಕ್ಕೆ ವಾರ್ಷಿಕ ೫,೬೨೨ ಕೋಟಿ ರೂ.ಹೊರೆಯಾಗಲಿದೆ. ಪ್ರಸಕ್ತ ವರ್ಷದಲ್ಲಿ (ಜುಲೈ-ಫೆಬ್ರವರಿ) ೩,೭೪೮ ಕೋಟಿ ರೂ. ಹೊರೆಬೀಳಲಿದೆ.
Discussion about this post