Read - < 1 minute
ನವದೆಹಲಿ, ಅ.12: ವಿಮಾನದಲ್ಲಿ ಸಂಪೂರ್ಣ ನಗ್ನನಾಗಿ ಗಗನಸಖಿಯರು ಮತ್ತು ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಭುವನೇಶ್ವರ್-ನವದೆಹಲಿ ಮಾರ್ಗದ ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿ ಸಂಪೂರ್ಣ ಬೆತ್ತಲಾದ. ನಂತರ ಸಹಾಯ ಕೋರಿ ಅಲ್ಲಿನ ಸಹಾಯವಾಣಿ ಗುಂಡಿ ಒತ್ತಿದ.
ತಕ್ಷಣ ಶೌಚಾಲಯಕ್ಕೆ ಆಗಮಿಸಿದ ಗಗನಸಖಿಯರು ಈತನ ಅವಾಂತರ ನೋಡಿ ಬಟ್ಟೆ ಧರಿಸುವಂತೆ ಸಲಹೆ ಮಾಡಿದರು. ಆದರೆ, ಈ ಮೊಂಡು ವ್ಯಕ್ತಿ ಕೆಲಕಾಲ ಏರ್ ಹೋಸ್ಟೇಸ್ ಮತ್ತು ಸಹ ಪ್ರಯಾಣಿಕರಿಗೆ ತೊಂದರೆ ನೀಡಿ ರಾದ್ಧಾಂತ ಮಾಡಿದ.
ಈ ಬಗ್ಗೆ ಗಗನಸಖಿಯರು ವಿಮಾನದ ಕ್ಯಾಪ್ಟನ್ ಗೆ ದೂರು ನೀಡಿದ್ದರು. ವಿಮಾನ ಭೂಸ್ಪರ್ಶ ಮಾಡಿದ ನಂತರ ಈ ಮಹಾನುಭಾವನನ್ನು ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿತು.
Discussion about this post