Read - < 1 minute
ಮೈಸೂರು, ಸೆ.1: ವಿದ್ಯಾರಣ್ಯ ಪುರಂನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಆಶ್ರಮದಲ್ಲಿ ಸುಮಾರು ಮೂವತ್ತು ಮಕ್ಕಳಿಗೆ ಮುಂಬರುವ ಗಣಪತಿ ಮತ್ತು ಗೌರಿ ಹಬ್ಬವನ್ನು ಅವರ ಮನೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಿ ಎಂದು ಪ್ರತಿ ಮಕ್ಕಳಿಗೆ ತಲಾ ಒಂದು ಸಾವಿರ ರೂ.ಗಳ ಉಡುಗೊರೆಯ ಚೆಕ್ ವಿತರಣೆ ಮಾಡಲಾಯಿತು.
ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ ಮತ್ತು ಯವಕರ ತಂಡದ ವತಿಯಿಂದ ತಲಾ ಒಂದು ಸಾವಿರ ರೂ. ಮೌಲ್ಯದ ಚೆಕ್ಕುಗಳನ್ನು ಮಕ್ಕಳಿಗೆ ಮತ್ತು ಅವರ ಪೋಷಕರುಗಳಿಗೆ ವಿತರಿಸಲಾಯಿತು.
ಮೈಸೂರು ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಭಾ.ಜ.ಪ ಮುಖಂಡ ಜೋಗಿ ಮಂಜು, K MPK CHARITABLE TRUST ಅಧ್ಯಕ್ಷ ವಿಕ್ರಮ್, ಯುವ ಸಮಾಜ ಸೇವಕ ಸಂದೀಪ್ ಇದ್ದರು.
News by: ಪುನೀತ್ ಜಿ. ಕೂಡ್ಲೂರು
Discussion about this post