Read - < 1 minute
ಬೆಂಗಳೂರು: ಸೆ:24: ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರರ ವಶಕ್ಕೆ ಪಡೆಯುವ ಯಾವುದೇ ನಿರ್ಧಾರ ಈವರೆಗೆ ನಮ್ಮ ಮುಂದಿಲ್ಲ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲಾದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹಿಂಪಡೆಯಬೇಕೆಂದು ಯಾರೂ ನಮಗೆ ಮನವಿ ಕೊಟ್ಟಿಲ್ಲ. ಧಾರ್ಮಿಕ ಸಂಸ್ಥೆಗಳಿಗೆ ಕೈ ಹಾಕುವುದು ತುಂಬಾ ಕಷ್ಟದ ಕೆಲಸ. ಧಾರ್ಮಿಕ ಸಂಘ-ಸಂಸ್ಥೆಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಅದನ್ನು ಅರ್ಧಕ್ಕೆ ಬಿಡಲು ಆಗದು. ಸದ್ಯ ನಮ್ಮ ಮುಂದೆ ಯಾರು ವೈಯಕ್ತಿಕವಾಗಲಿ, ಸಂಘ-ಸಂಸ್ಥೆಗಳ ಮೂಲಕವಾಗಲಿ ಮನವಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
Discussion about this post