ಚಾಮರಾಜನಗರ: ಗಡಿ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ 118 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಕಟ್ಟಡ ನಾಳೆ (ಸೋಮವಾರ) ಲೋಕಾರ್ಪಣೆಯಾಗಲಿದೆ.
ಬಹುದಿನಗಳ ಕನಸಾದ ವೈದ್ಯಕೀಯ ಕಾಲೇಜು ಕಟ್ಟಡದ ಲೋಕಾರ್ಪಣೆ ಹಾಗೂ ತರಗತಿಗಳ ಆರಂಭ ಸೇರಿದಂತೆ, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು.
ಸೆಪ್ಟೆಂಬರ್ 19ರಂದು ಚಾಮರಾಜನಗರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ಬಹು ನಿರೀಕ್ಷಿತ ವೈದ್ಯಕೀಯ ಕಾಲೇಜು, ಆರ್ಟಿಒ ಕಛೇರಿ, ವಾಲ್ಮೀಕಿ ಸಮುದಾಯ ಭವನದ ನೂತನ ಕಟ್ಟಡಗಳನ್ನ ಉದ್ಘಾಟಿಸುವರು.
ನಂತರ ಉಪ್ಪಾರ ಭವನ ಸೇರಿದಂತೆ ಚಾಮರಾಜನಗರ ಪಟ್ಟಣದ ಅಭಿವೃದ್ದಿಗೆ ಸಕರ್ಾರ ನೀಡಿರುವ 50 ಕೋಟಿ ರೂಪಾಯಿಯ ವಿಶೇಷ ಅನುದಾನದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸುವರು.
ಈ ಕುರಿತು ವಿವರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್, ಚಾಮರಾಜನಗರ ಪ್ರತ್ಯೇಕ ಜಿಲ್ಲಾ ಕೇಂದ್ರವಾದ ಬಳಿಕ ವೈದ್ಯಕೀಯ ಕಾಲೇಜು ಆರಂಭವಾಗುತ್ತಿರುವುದು ಅಭಿವೃದ್ದಿಯ ದೃಷ್ಠಿಯಿಂದ ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಮುಖ್ಯಮಂತ್ರಿಗಳು ನೆರವೇರಿಸುವ ಉದ್ಘಾಟನೆ ಹಾಗೂ ಶಿಲಾನ್ಯಾಸದ ಕಾಮಗಾರಿಗಳ ವಿವರ ನೀಡಿದ ಅವರು, ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಈಶ್ವರ್ಖಂಡ್ರೆ, ಆಂಜನೇಯ, ರಾಮಲಿಂಗರೆಡ್ಡಿ, ರಮೇಶ್ಕುಮಾರ್ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನಾಳೆ (19-09-2016ರ ಸೋಮವಾರ) ಬೆಳಿಗ್ಗೆ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ, ಯಡಬೆಟ್ಟದ ತಪ್ಪಲಿನಲ್ಲಿ ನಿಮರ್ಿಸಿರುವ ವೈದ್ಯಕೀಯ ಕಾಲೇಜು ಕಟ್ಟಡಗಳನ್ನು ಉದ್ಘಾಟಿಸುವರು.
Discussion about this post