ನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರುಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತುಚಿನ್ನದಅಂಬಾರಿಯಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ನ ವಜಾಗೊಳಿಸಿದೆ.
ಮೈಸೂರುಅರಮನೆಯ ಸುಪದರ್ಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ ಸಂದರ್ಭದಲ್ಲಿ ಬಳಸುವ ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿ ಪ್ರೊ.ಪಿ.ವಿ.ನಂಜರಾಜೇಅರಸ್ಅವರು ಸುಪ್ರೀಂಕೋಟರ್್ಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸವರ್ೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂತರ್ಿಟಿ.ಎಸ್.ಠಾಕೂರ್ ನೇತೃತ್ವದ ಪೀಠವೊಂದು ಈ ಮನವಿ ಅಜರ್ಿಯನ್ನು ವಜಾಗೊಳಿಸಿದೆ.
ಮೈಸೂರುಅರಮನೆ(ಸ್ವಾಧೀನ ಮತ್ತು ವಗರ್ಾವಣೆ) ಕಾಯ್ದೆ , 1998 ವಿಷಯ ಪ್ರಶ್ನಿಸಲ್ಪಟ್ಟಿರುವ ಕನರ್ಾಟಕ ಹೈಕೋಟರ್್ನ ಮೊರೆ ಹೋಗುವಂತೆ ಪೀಠವು ಸೂಚಿಸಿದೆ.
ನ್ಯಾಯಮೂತರ್ಿಗಳಾದ ಎ.ಎಂ.ಖಾನ್ ವಿಲ್ನರ್ ಮತ್ತು ಡಿ.ವೈ.ಚಂದ್ರಚೂಡಅವರನ್ನು ಒಳಗೊಂಡ ಪೀಠವು ಈ ಅಜರ್ಿಯನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿ, ಹೈಕೋಟರ್್ ಮೊರೆ ಹೋಗಲು ಅರಸ್ಅವರಿಗೆ ಸ್ವಾತಂತ್ರ್ಯ ನೀಡಿದೆ.
ಅಜರ್ಿಯನ್ನು ಹಿಂದಕ್ಕೆ ಪಡೆಯಲಾಗಿದೆಎಂದು ಪರಿಗಣಿಸಿ ಸುಪ್ರೀಂಕೋಟರ್್ ಮನವಿ ವಜಾಗೊಳಿಸುವ ಆದೇಶ ನೀಡಿದೆ.
Discussion about this post