ಮಡಿಕೇರಿ: ಟಿಪ್ಪು ಜಯಂತಿಯನ್ನು ಈ ವರ್ಷವೂ ನ.10ರಂದು ಆಚರಿಸಲು ಹೊರಟಿರುವ ಸರಕಾರದ ಆದೇಶವನ್ನು ಕೊಡಗಿನ ಹೆಚ್ಚಿನ ಜಾತಿಜನಾಂಗದವರು ವಿರೋಧಿಸಿಸುತಿದ್ದರೂ ಸಿದ್ದತೆಗೆ ಮುಂದಾಗಿದ್ದಾರೆ. ಆಡಳಿತ ಸರಕಾರಕ್ಕೊಂದು ನಮ್ಮದೊಂದು ಪ್ರಶ್ನೆ ಟಿಪ್ಪು ಜನಿಸಿದ್ದು ನವೆಂಬರ್ 10ರಂದೋ ಅಥವಾ ನ.20ರಂದೋ?
ಸರಕಾರವೇ ಮುದ್ರಿಸಿ ಪ್ರಕಟಿಸಿದ ಪುಸ್ತಕ ದಾಖಲೆಗಳಲೆಲ್ಲ ಹೈದರನ ಮಗನಾದ ಟಿಪ್ಪು 1753ರ ನವೆಂಬರ್ 20ರಂದು ಶುಕ್ರವಾರದಂದು ಬೆಂಗಳೂರಿನ ದೇವನ ಹಳ್ಳಿಯಲ್ಲಿ ಜನ್ಮತಾಳಿದ ನೆಂದು 2011ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾದ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಹಾಗೂ ಟಿಪ್ಪುವಿನ ಅಧ್ಯಯನ ವಿಷಯದಲ್ಲಿರುವ ಹಲವು ಪುಸ್ತಕಗಳಲೆಲ್ಲ ನವೆಂಬರ್20 ಎಂದೇ ಮುದ್ರಿಸಲಾಗಿದೆ.
ಟಿಪ್ಪುವಿನ ಜನನ ನವೆಂಬರ್20 ಆದರೆ ಟಿಪ್ಪುವಿನ ಜನನ ದಿನ ಮೊದಲೇ ಟಿಪ್ಪು ಜಯಂತಿಯನ್ನು ಆಚರಿಸುವ ಸರಕಾರಕ್ಕೆ ಭೇಷ್ ಅನ್ನಲೇ ಬೇಕಲ್ಲವೇ?. ಮಕ್ಕಳಿಗೆ ಕಲಿಸುವುದು ಟಿಪ್ಪು ಜಯಂತಿ ನ.20ಎಂದು, ಆಚರಿಸುವುದು ನ.10ರಂದು! ಶಾಂತಿ ಸಮೃದ್ಧಿಯಿಂದ ಕೂಡಿದಂತಹ ಕೊಡವ ನಾಡನ್ನು ಧ್ವಂಸ ಮಾಡಿದ ಟಿಪ್ಪುವಿನ ಜಯಂತಿಯ ಹಿಂದಿನ ಉದ್ದೇಶವಾದರೂ ಏನು? ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
News By: INDRESH
Discussion about this post