ಚೆನ್ನೈ, ಸೆ.19: ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಮ್ ಕುಮಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ವಾತಿ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿ ಆರೋಪಿ ರಾಮ್‌ನನ್ನು ಚೆನ್ನೈ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿರಿಸಲಾಗಿತ್ತು. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಜೈಲಿನಲ್ಲಿ ಆತ್ಮಹತ್ಯೆ ಶರಣಾಗಿದ್ದ. ಜೈಲಲ್ಲಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿದ ರಾಮ್ ಕುಮಾರ್ ಬಳಿಕ ಅದನ್ನು ತನ್ನ ಕುತ್ತಿಗೆಗೆ ಬಲವಾಗಿ ಸುತ್ತಿಕೊಂಡಿದ್ದಾನೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಜೈಲು ಅಧಿಕಾರಿಗಳು ಕೂಡಲೇ ರಾಮ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ.
ಆದರೆ ಈ ಕುರಿತಂತೆ ಮಾತನಾಡಿರುವ ರಾಮ್ ಪರ ವಕೀಲರು, ರಾಮ್ ಸಾವು ಆತ್ಮಹತ್ಯೆಯಲ್ಲ. ಬದಲಾಗಿ ಅದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.
ನಿನ್ನೆಯಷ್ಟೇ ರಾಮ್‌ನನ್ನು ಜೈಲಿನಲ್ಲಿ ಮಾತನಾಡಿಸಿಕೊಂಡು ಬಂದಿದ್ದೇನೆ. ಜಾಮೀನು ಸಿಗುವ ಹಾಗೂ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ ಎಂದು ಸಂತಸ ಪಟ್ಟಿದ್ದ. ಆದರೆ, ದಿಢೀರನ ಅವನು ಸಾವನ್ನಪ್ಪಿರುವುದು ಸಂಶಯ ಮೂಡಿಸಿದೆ. ಇದು ವ್ಯವಸ್ಥಿತವಾದ ಕೊಲೆಯಾಗಿದೆ. ಆತ್ಮಹತ್ಯೆಯಲ್ಲ ಎಂದು ಆರೋಪ ಮಾಡಿದ್ದಾರೆ.
———–
Discussion about this post