Read - < 1 minute
ಬೆಂಗಳೂರು: ಸೆ:28: 2016 ನೇ ಸಾಲಿನ ಮುಂದಿನ 3 ತಿಂಗಳು ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭೂ ವಿಜ್ಞಾನ ಮತ್ತು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈಶಾನ್ಯ ಮಾರುತ ತಮಿಳುನಾಡಿಗೆ ಸಾಮಾನ್ಯವಾಗಿದ್ದು (ಪ್ರತಿಶತ ಶೇ. 90 ರಿಂದ 100 ರವರೆಗೆ)ಇರಲಿದೆ. 2015 ರಲ್ಲಿ ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಮಾಹಿತಿ ಶೇ. 100 ರಷ್ಟು ನೈಜವಾಗಿದೆ.
ಶೇಕಡ 30 ರಷ್ಟು ಮಳೆ ತಮಿಳುನಾಡಿಗೆ ಈಶಾನ್ಯ ಮುಂಗಾರುನಿಂದ( ಅಕ್ಟೋಬರ್ ರಿಂದ ಡಿಸೆಂಬರ್ ವರೆಗೆ) ಬರಲಿದೆ. ಈ ಮಾರುತದಿಂದ ಈ ವರ್ಷ ಶೇಕಡ 48 ರಷ್ಟು ಮಳೆಯಾಗಲಿದೆ. ಮಳೆಯ ಪ್ರಮಾಣವನ್ನು ಭಾರತೀಯ ಹವಾಮಾನ ಇಲಾಖೆ ಸತತವಾಗಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಿದೆ. ಇದಕ್ಕಾಗಿ (ಪಿಸಿಆರ್) 5 ಪ್ಯಾರಾಮೀಟರ್ ಪ್ರಿನ್ಸಿಪಲ್ ಕಾಂಪೋನೆಂಟ್ ರಿಗ್ರೆಷನ್ ವಿಧಾನವನ್ನು ಅಳವಡಿಸಿಕೊಂಡಿದೆ. ಅದರಂತೆಯೇ 4 (ಪಿಸಿಆರ್) ಮಾಡೆಲ್ನ್ನು ಪತ್ರ್ಯೇಕವಾಗಿ ತಮಿಳುನಾಡಿನ ಹವಾಮಾನಕ್ಕಾಗಿಯೇ ಮೀಸಲಿರಿಸಲಾಗಿದೆ.
ಇದನ್ನು ಬಳಸಿಕೊಂಡು ಮುನ್ಸೂಚನೆ ನೀಡಬಹುದಾದಲ್ಲಿ ಸಮಬಾಜಕ ವೃತ್ತದಿಂದ ಪೂರ್ವ ಪೆಸಿಫಿಕ್ ಕಡೆ ವಾಲಿ ತೀಕ್ಷಗೊಂಡಿದೆ. ಇದರನ್ವಯ ಬರುವ ಅಕ್ಟೋಬರ್ 2016 ರಿಂದ ಡಿಸೆಂಬರ್ 2016 ರವರೆಗೆ ತಮಿಳುನಾಡು, ಆಂಧ್ರಕರಾವಳಿ, ರಾಯಲಸೀಮ, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಪ್ರತಿಶತ 90 ರಿಂದ 100 ರವರೆಗೆ ಮಳೆಯಾಗಲಿದೆ. ( 1951 ರಿಂದ 2000 ವರೆಗೆ 332.1 ಮೀ ಮಳೆಯಾಗಿದೆ)
2016 ನೆ ವರ್ಷದಲ್ಲಿ ತಮಿಳುನಾಡಿಗೆ ಉತ್ತಮ ಮಳೆಯಾಗುವ ಲಕ್ಷಣಗಳಿವೆ (ಶೇ. 90 ರಿಂದ 100 ರವರೆಗೆ) ತಮಿಳುನಾಡಿನಲ್ಲಿ ಈಶಾನ್ಯ ಮಾರುತದಿಂದ 1951 ರಿಂದ 2000 ರವರೆಗೆ 438.0 ಮಿ.ಮಿ. ಮಳೆಯಾಗಿರುತ್ತದೆ ಎಂದು ಕೇಂದ್ರ ಸರ್ಕಾರದ ಭೂ ವಿಜ್ಞಾನ ಮತ್ತು ಹವಾಮಾನ ಇಲಾಖೆ ನವದೆಹಲಿಯ ಪ್ರಕಟಣೆ ತಿಳಿಸಿದೆ.
Discussion about this post