Read - 2 minutes
ಬೆಂಗಳೂರು: ಸೆ:24; ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಹಿರಿಯ ನಾಯಕ ಈಶ್ವರಪ್ಪ ನಡುವಣ ಬ್ರಿಗೇಡ್ ಕಲಹ ತಾರಕಕ್ಕೇರಿದ್ದು ಈ ಹಿನ್ನೆಲೆಯಲ್ಲಿ ಉಭಯ ನಾಯಕರ ಮಧ್ಯೆ ಸಂಧಾನ ನಡೆಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ಕೇರಳದ ಕ್ಯಾಲಿಕಟ್ನಲ್ಲಿ ನಾಳೆ ನಡೆಯಲಿರುವ ಪಕ್ಷದ ನ್ಯಾಷನಲ್ ಕೌನ್ಸಿಲ್ ಸಭೆ ನಂತರ ಉಭಯ ನಾಯಕರ ಮಧ್ಯೆ ಇರುವ ವೈಮನಸ್ಯ ಪರಿಹರಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಮುಂದಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿನ್ನೆಯಿಂದ ಕೇರಳದ ಕ್ಯಾಲಿಕಟ್ನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ನಾಳೆ ನ್ಯಾಷನಲ್ ಕೌನ್ಸಿಲ್ ಸಭೆ ನಡೆಯಲಿದ್ದು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆ ನಂತರ ಉಭಯ ನಾಯಕರ ನಡುವಣ ಬ್ರಿಗೇಡ್ ಸಂಘರ್ಷವನ್ನು ಪರಿಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಪ್ರತ್ಯೇಕ ಸಭೆ ನಡೆಸಲಿದ್ದು,ಈ ಸಭೆಯಲ್ಲಿ ಸ್ಥಳೀಯ ಆರ್ಎಸ್ಎಸ್ ನಾಯಕರನೇಕರು ಭಾಗಿಯಾಗಲಿದ್ದಾರೆ.
ಈಶ್ವರಪ್ಪ ಅವರು ಕಟ್ಟಲುದ್ದೇಶಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕುದಿಯುತ್ತಿದ್ದು, ಈ ಹಿಂದೆ ರಾಜ್ಯದಲ್ಲಿ ಸಂಘ ಪರಿವಾರದಿಂದ ಪಕ್ಷದ ಕೆಲಸಕ್ಕೆ ನಿಯೋಜಿತರಾದ ನಾಯಕರೊಬ್ಬರು ಈ ಬ್ರಿಗೇಡ್ ಹಿಂದಿನ ಸೂತ್ರಧಾರಿ ಎಂದು ವರಿಷ್ಠರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈಶ್ವರಪ್ಪ ಹಾಗೂ ತಮಗೆ ವೈಯಕ್ತಿಕ ದ್ವೇಷವೇನೂ ಇಲ್ಲ.ಆದರೆ, ಸಂಘ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಈ ಸೂತ್ರಧಾರಿ ಈಶ್ವರಪ್ಪ ಅವರು ಬ್ರಿಗೇಡ್ ರಾಜಕೀಯಕ್ಕೆ ಎಂಟ್ರಿ ಆಗಲು ಮುಂದುವರೆಯಲು ಮೂಲ ಕಾರಣ ಎಂದು ಯಡಿಯೂರಪ್ಪ ವರಿಷ್ಠರಿಗೆ ದೂರಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ ನಂತರ ರಾಜ್ಯಾದ್ಯಂತ ಈಶ್ವರಪ್ಪ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಡಿಯೂರಪ್ಪ ಅವರ ನಿಧರ್ಾರಗಳನ್ನು ವಿರೋಧಿಸುವ ನಾಯಕರು ಈ ಬ್ರಿಗೇಡ್ ಜತೆ ಕೈ ಜೋಡಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.
ಇದೇ ಕಾರಣಕ್ಕಾಗಿ ಅಸಮಾಧಾನಗೊಂಡ ಯಡಿಯೂರಪ್ಪ, ಪಕ್ಷದ ವೇದಿಕೆಯಲ್ಲೇ ಹಿಂದುಳಿದ ಹಾಗೂ ಎಸ್ಸಿ-ಎಸ್ಟಿ ಮೋಚರ್ಾಗಳಿದ್ದು, ಅದರ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕು ಎಂದು ಆರಂಭದಲ್ಲೇ ಹೇಳಿದ್ದರು.
ಆದರೆ, ಬ್ರಿಗೇಡ್ ಕಟ್ಟುವ ಮೂಲಕ ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದು, ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಉದ್ದೇಶ ಎಂದು ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದರು.
ಆದರೆ, ದಿನ ಕಳೆದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಶಕ್ತಿ ಹೆಚ್ಚುತ್ತಿದ್ದು, ಇದರಿಂದಾಗಿ ಆಕ್ರೋಶಗೊಂಡಿರುವ ಯಡಿಯೂರಪ್ಪ ಇದೀಗ ನೇರವಾಗಿ ಬ್ರಿಗೇಡ್ ಹಿಂದಿನ ಸೂತ್ರಧಾರಿಯ ಕುರಿತು ದೂರು ನೀಡಿದ್ದಾರೆ.
ಈಶ್ವರಪ್ಪ ಹಾಗೂ ನನ್ನ ಮಧ್ಯೆ ಕೆಲ ಕಾರಣಗಳಿಗಾಗಿ ವೈಮನಸ್ಸು ಇರುವುದು ನಿಜ. ಆದರೆ, ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಶಿವಮೊಗ್ಗದ ಸಂಘ ಪರಿವಾರದ ನಾಯಕರನ್ನೂ ಕರೆಸಿ,ಅವರ ಸಮ್ಮುಖದಲ್ಲೇ ಸಮಸ್ಯೆ ಇತ್ಯರ್ಥವಾಗಲಿ ಎಂದು ಯಡಿಯೂರಪ್ಪ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.
ಇದೇ ರೀತಿ ದಕ್ಷಿಣ ಭಾರತದಲ್ಲಿ ಇವತ್ತು ಸಂಘ ಪರಿವಾರದ ಪ್ರಮುಖ ನಾಯಕರಾಗಿ ಬೆಳೆದಿರುವ ವ್ಯಕ್ತಿಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಿಂದಿನ ಸೂತ್ರಧಾರಿಯಾಗಿದ್ದು, ಅವರೇ ಆರ್ಎಸ್ಎಸ್ ವರಿಷ್ಠರಿಗೆ ಈ ಬ್ರಿಗೇಡ್ ಸ್ಥಾಪನೆ ಅತ್ಯವಶ್ಯಕ ಎಂದು ಹೇಳಿದ್ದಾರೆ.
ಅವರ ಮಾತು ಕೇಳಿ ರಾಷ್ಟ್ರಮಟ್ಟದಲ್ಲೂ ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಬೆಂಬಲ ನೀಡಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಇದರಿಂದ ರಾಜ್ಯದಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದು ಯಡಿಯೂರಪ್ಪ ಅವರು ವರಿಷ್ಠರಿಗೆ ಸಲ್ಲಿಸಿರುವ ದೂರು.
ಇದೇ ಕಾರಣಕ್ಕಾಗಿ ಉಭಯ ನಾಯಕರ ಮಧ್ಯೆ ಸಂಧಾನ ನಡೆಸಲು ವರಿಷ್ಠರು ನಿರ್ಧರಿಸಿದ್ದು ನಾಳೆ ರಾಜ್ಯ ಬಿಜೆಪಿಯ ಬ್ರಿಗೇಡಿಯರ್ಗಳಿಬ್ಬರ ನಡುವಣ ಬ್ರಿಗೇಡ್ ಕಲಹವನ್ನು ಇತ್ಯರ್ಥ ಪಡಿಸಲು ಸಜ್ಜಾಗಿದ್ದಾರೆ.
Discussion about this post