Read - < 1 minute
ಕೊಚ್ಚಿ, ಅ.19: ತ್ರಿವಳಿ ತಲಾಕ್ ಕುರಿತ ವಿವಾದ ಆಧಾರ ರಹಿತ ಎಂದು ಕೇಂದ್ರ ನಗರಾಭಿವೃದ್ಧಿ ಹಾಗೂ ವಾರ್ತಾ ಮತ್ತು ಪ್ರಸಾರ
ಖಾತೆ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ದೇಶದಲ್ಲಿನ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುವುದು ಸರ್ಕಾರದ ಗುರಿಯಾಗಿದೆ. ತ್ರಿವಳಿ ತಲಾಕ್ ಕುರಿತಂತೆ ಸರ್ಕಾರ ತನ್ನ ನಿಲುವನ್ನು ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಈ ವಿಷಯವನ್ನು ಏಕರೂಪ ನಾಗರಿಕ ಸಂಹಿತೆಯೊಂದಿಗೆ ಸೇರಿಸುವ ಅಗತ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಕೊಚ್ಚಿಗೆ ಒಂದು ದಿನದ ಭೇಟಿ ನೀಡಿರುವ ಅವರು, ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಾದ ಸ್ವಚ್ಛಭಾರತ್, ಸ್ಮಾರ್ಟ್ ಸಿಟಿ, ಅಮೃತ್ ಹೃದಯ್ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಪ್ರಗತಿಯ ಬಗ್ಗೆ ಪರಿಶೀಲಿಸಿದರು.
Discussion about this post