Read - < 1 minute
ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ಅವರು ನಿರ್ಮಿಸಿರುವ `ಬದ್ಮಾಶ್’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ದಸರಾದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶ್ರೀಷ ಕುದುವಳ್ಳಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ವಿನೋದ್, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಶಂಕರ್ ನೃತ್ಯ ನಿರ್ದೆಶನ ಈ ಚಿತ್ರಕ್ಕಿದೆ. `ಬದ್ಮಾಶ್’ಗೆ ಆಕಾಶ್ ಶ್ರೀವತ್ಸ ಕಥೆ, ಪ್ರಶಾಂತ್, ಸಂತೋಷ್ ಗೋಪಾಲ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಶ್ರೀವತ್ಸ, ವಿನೋದ್ ಕುಮಾರ್ ಹಾಗೂ ಪ್ರತೀಕ್ ಸಂಭಾಷಣೆ ಬರೆದಿದ್ದಾರೆ.
ಧನಂಜಯ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಚಿತಾ ಶೆಟ್ಟಿ. ಅಚ್ಯುತಕುಮಾರ್, ಜಹಂಗೀರ್, ರಮೇಶ್ ಭಟ್, ರಮೇಶ್ ಪಂಡಿತ್, ಬಿ.ಸುರೇಶ್, ಪ್ರಕಾಶ್ ಬೆಳವಾಡಿ, ಶ್ರೀನಿವಾಸ ಪ್ರಭು, ಬಿರಾದಾರ್, ಸುಚೇಂದ್ರ ಪ್ರಸಾದ್, ಪನ್ನಗಾಭರಣ, ಲಕ್ಷ್ಮೀ ಆನಂದ್, ಬೆಂಗಳೂರು ನಾಗೇಶ್, ಎಂ.ಎಸ್.ಉಮೇಶ್, ಗೌರೀಶ್ ಅಕ್ಕಿ, ಅವಿನಾಶ್ ಶೆಟ್ಟಿ, ಕರಡಿ ಸೋಮ, ಸೂರ್ಯ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Discussion about this post