Read - < 1 minute
ನವದೆಹಲಿ, ಸೆ.14: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ಉಲ್ಬಣಗೊಂಡಿದೆ. ಈವರೆಗೆ ಆರು ಮಂದಿ ಮೃತಪಟ್ಟಿದ್ದು, ಸೋಂಕುಪೀಡಿತರ ಸಂಖ್ಯೆ ಸಾವಿರಕ್ಕೆ ತಲುಪಿದೆ.
ಚಿಕುನ್ ಗುನ್ಯಾ ರೋಗ ಉಲ್ಬಣಗೊಂಡಿದ್ದು, ಪ್ರತಿ ದಿನ ಸಾವು ವರದಿಯಾಗುತ್ತಿದೆ. ನಿನ್ನೆಯಷ್ಟೇ 75 ವರ್ಷದ ಪ್ರಕಾಶ್ ಕಾಲರಾ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನು 22 ವರ್ಷದ ಯುವತಿ ಕೂಡ ಚಿಕುನ್ ಗ ಗುನ್ಯಾಗೆ ಬಲಿಯಾಗಿದ್ದಾಳೆ.
ದೆಹಲಿಯಲ್ಲಿ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಹರಡುತ್ತಿದ್ದಂತೆ ಇತ್ತ, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರಿದಿವೆ.
ಈ ಮಧ್ಯೆ ನಗರದಲ್ಲಿ ರೋಗ ಉಲ್ಬಣಗೊಂಡು, ಜನರು ಆಸ್ಪತ್ರೆ ಮೊರೆ ಹೋಗುತ್ತಿದ್ದರೆ, ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಟಲು ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದರೆ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಫಿನ್ ಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಇತ್ತ ಬಿಜೆಪಿ ಆಪ್ ವಿರುದ್ಧ ಕಿಡಿಕಾರಿದೆ.
Discussion about this post