ಬೆಂಗಳೂರು, ಆ.28- ಡೈನಮಿಕ್ ಹೀರೋ ದೇವರಾಜ್ ಅವರ ಎರಡನೇ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ.
ಕಂಠೀರವಾ ಸ್ಟುಡಿಯೋದಲ್ಲಿ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ನಡೆದಿ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿತು.ದೇವರಾಜ್ ಪುತ್ರ ಪ್ರಣಾಮ್ ನಾಯಕಿ ನಿಧಿಕುಶಾಲಪ್ಪ ಈ ಚಿತ್ರದಲ್ಲಿ ನಟಿಸುತ್ತಿದ್ದು, ಪ್ರಣಾಮ್ಗೆ ಇದು ಮೊಟ್ಟಮೊದಲ ಚಿತ್ರವಾಗಿದೆ.ಚಿತ್ರವನ್ನು ವೇಮುಲ ನಿದರ್ೆಶಿಸುತ್ತಿದ್ದಾರೆ.
ಈಗಾಗಲೇ ದೇವರಾಜ್ ಅವರ ಹಿರಿಯ ಪುತ್ರ ಪ್ರಜ್ವಲ್ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದು, ಇದೀಗ ಎರಡನೇ ಮಗ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಚಿತ್ರ ಮುಹೂರ್ತದ ಸಂದರ್ಭದಲ್ಲಿ ಶಿವರಾಜ್ಕುಮಾರ್, ನೆನಪಿರಲಿ ಪ್ರೇಮ್, ನಂದಕಿಶೋರ್, ತೆಲುಗಿನ ನಿದರ್ೆಶಕ ಸುಕುಮಾರ್ ಮತ್ತಿತರರು ಪಾಲ್ಗೊಂಡು ಹಾರೈಸಿದರು.
Discussion about this post