Read - < 1 minute
ಮೈಸೂರು, ಸೆ.2: ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಇಂದು ಕರೆ ನೀಡಲಾಗಿದ್ದು ಭಾರತ್ ಬಂದ್ ಗೆ ನಂಜನಗೂಡಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ನಂಜನಗೂಡಿನಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ನಡೆದಿದ್ದು, AT&S ಸಂಸ್ಥೆಯ ಕಾರ್ಮಿಕರು ಬಂದ್ ಗೆ ಬೆಂಬಲ ನೀಡಿದ್ದರು. ವಿವಿಧ ಕಾರ್ಖಾನೆಗಳ ಕಾರ್ಮಿಕರು AT&S ಸಂಸ್ಥೆಯ ಅತಿ ದೊಡ್ಡ ಕಾರ್ಮಿಕ ಸಂಘಟನೆಯೋಂದಿಗೆ ಕೈಜೋಡಿಸಿದರು.
AT&S ಕಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರೂ ಆದ ಕೆ.ಆರ್ ಮಂಜು ಮಾತನಾಡಿ, ರೈತರ ನಂತರದ ಭಾರತದ ಮತ್ತೊಂದು ಬೆನ್ನೆಲೆಬು ಕಾರ್ಮಿಕರು. ನಮ್ಮಂತಹ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರಗಳು ಇಡೇರಿಸಬೇಕು, ಶ್ರಮಂ ಏವ ಜಯತೇ ಎಂದ ಕೇಂದ್ರ ಸರ್ಕಾರದ ಬಗ್ಗೆ ನಮಗೆ ಅತಿ ಹೆಚ್ಚು ಭರವಸೆ ಇದ್ದವು, ಆದರೆ ಈಗ ಅದೆಲ್ಲ ಹುಸಿಯಾಗುವ ನಿರೀಕ್ಷೆಯಲ್ಲಿ ನಾವು ಇದ್ದೇವೆ, ಅದೆಷ್ಟೋ ಕಾರ್ಖಾನೆಗಳು ಮುಚ್ಚುತ್ತಿದ್ದು ಸರ್ಕಾರ ಅವುಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಮುಂದುವರಿಸಬೇಕು ಹಾಗೂ ಕಾರ್ಮಿಕರ ಉದ್ಯೋಗಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಹಾಗೂ PF ಹಣದ ಪೂರ್ಣ ಹಕ್ಕು ನಮ್ಮದಾಗಿರಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ಮಧುಸೂದನ್, ಮಹೇಶ್, ಕಾಂತರಾಜ್, ರಾಜ್ ಕುಮಾರ, ಅನುಲನ್, ಅನಂತ ಇದ್ದರು.
Discussion about this post