ನವದೆಹಲಿ, ಸೆ.9: 50 ವರ್ಷಗಳಿಂದ ಕಾವೇರಿ ವಿಷಯದಲ್ಲಿ ಹೋರಾಡಿದ್ದೇನೆ, ಎರಡು ಸಲ ರಾಜೀನಾಮೆ ನೀಡಿದ್ದೇನೆ. ಕಾವೇರಿ ವಿಷಯದಲ್ಲಿ ಸಾಕಷ್ಟು ನೋವು ಉಂಡಿದ್ದೇನೆ, ನಮ್ಮ ಜನರಿಗೂ ಸಾಕಷ್ಟು ನೋವಾಗಿದೆ, ನನ್ನ ಮತ್ತು ಜನರ ನೋವು ಹೇಳಿಕೊಳ್ಳಲು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಅವರು, ನಾರಿಮನ್ ಜೊತೆ ಎಲ್ಲವನ್ನೂ ಹಂಚಿಕೊಂಡಿದ್ದೇನೆ, ಪ್ರಧಾನಿ ಭೇಟಿ ಮಾಡಿ ಹೇಳಿಕೊಳ್ಳಲಿದ್ದೇನೆ. ಅವುಗಳನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳಲಾರೆ. ಕಾವೇರಿಕೊಳ್ಳದ ಹೋರಾಟದ ಬಗ್ಗೆ ಮನವರಿಕೆ ಮಾಡಿದ್ದೇನ ಗುಪ್ತದಳದಿಂದ ಹೋರಾಟದ ಬಗ್ಗೆ ಮಾಹಿತಿ ತರಿಸಿಕೊಂಡಿದ್ದಾರೆ. ಸಿಎಂ ಪತ್ರಬರೆದ ಬಗ್ಗೆ ಪ್ರಸ್ತಾಪಿಸಿದ್ದೇನೆ,
ಮೂರು ರಾಜ್ಯ ಸಿಎಂಗಳ ಸಭೆ ಕರೆಯುವಂತೆ ಮನವಿ ಮಾಡಿದ್ದೇನೆ. ಏನು ಮಾಡುತ್ತೇನೆ ಎಂದು ಪ್ರಧಾನಿ ಹೇಳಿಲ್ಲ. ಅವರ ಸ್ವಭಾವವೇ ಹಾಗೆ ಎಂದರು.
ಶಾಂತಿಯುತವಾಗಿ ನೆಡಸುವವರ ಮೇಲೆ ಲಾಠಿ ಚಾರ್ಜ್ ಮಾಡಬಾರದಿತ್ತು.ರೈತರ ಮೇಲೆ ಲಾಠಿ ಬೀಸಿ ಸರ್ಕಾರ ತಪ್ಪು ಎಸಗಿದೆ.ಬಂದ್ ಶಾಂತಿಯುತವಾಗಿ ನಡೆಸಿದ ಎಲ್ಲ ಸಂಘಟನೆಗಳಿಗೂ ಧನ್ಯವಾದಗಳನ್ನು ಅರ್ಪಿಸಿದರು.
Discussion about this post