ಕೋಲಾರ: ಸೆ:10: ತಮ್ಮ ಫಾರ್ಮರ್ ನಲ್ಲಿರುವ ಹಸುಗಳಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಒಡೆತನದ ರಕ್ಷಿತ್ ಡೇರಿ ಫಾಮರ್್ ನಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ, ಇಲ್ಲಿನ ಹಾಲು ಕುಡಿಯುವುದರಿಂದ ಯಾವುದೇ ಹಾನಿಯಾಗಲ್ಲ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ 11 ವಿಜ್ಞಾನಿಗಳ ತಂಡ ಉನ್ನತಮಟ್ಟದಲ್ಲಿ ಹಸುಗಳ ರಕ್ತ ಶೇಖರಿಸಿ ಪರೀಕ್ಷಿಸಿ ಇದರ ಕುರಿತಂತೆ ಚಚರ್ೆ ನಡೆಸಿ ಸಕರ್ಾರಕ್ಕೆ ವರದಿ ನೀಡಿದ್ದಾರೆ.
ದೇಶದಲ್ಲಿ ಕುಂದುರೋಗದಿಂದ ಶೇ.1ರಿಂದ 2ರಷ್ಟು ಹಸುಗಳು ಬಳಲುತ್ತಿದ್ದರೆ, ಬೇರೆ ದೇಶಗಳಲ್ಲಿ ಇವುಗಳ ಸಂಖ್ಯೆ ಶೇ.5ರಷ್ಟಿದೆ. ಪರೀಕ್ಷೆ ನಡೆಸಿರುವ ವಿಜ್ಞಾನಿಗಳ ತಂಡ ಈ ರೋಗ ಮಾರಕವಲ್ಲ. ಹಸುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವುದರಿಂದ ಕಾಯಿಲೆ ಗುಣಪಡಿಸಬಹುದೆಂದು ಸಲಹೆ ನೀಡಿದ್ದಾರೆ ಎಂದರು.
ನನ್ನ ರಾಜಕೀಯ ಭವಿಷ್ಯಕ್ಕೆ ಮಸಿ ಬಳಿಯಲು ಕೆಲವರು ಸುಳ್ಳು ಸುದ್ದಿಗಳನ್ನು ಹರಡಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಆದರೆ ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಎಂದು ಹೇಳಿದರು.
ರೈತರಿಗೆ ಹಸುಗಳನ್ನು ನಮ್ಮ ಫಾರಂನಿಂದ ಮಾರಾಟ ಮಾಡಿಲ್ಲ. ನನ್ನ ಬಳಿ ಈಗಾಗಲೇ ಒಂದು ಸಾವಿರ ಹಸುಗಳಿವೆ. ಇನ್ನು ಕೆಲವೇ ದಿನಗಳಲ್ಲಿ ಹಾಲನ್ನು ನಮ್ಮ ಡೈರಿಯಿಂದಲೇ ನೇರವಾಗಿ ಪ್ಯಾಕೆಟ್ ಮೂಲಕ ಮಾರಾಟ ಮಾಡುತ್ತೇವೆ. ಅನ್ಟಚ್ ಮಿಲ್ಕನ್ನು ವಿಶೇಷವಾಗಿ ಗ್ರಾಹಕರಿಗೆ ನೀಡಲಿದ್ದೇವೆ. ಈ ಹಾಲಿನ ಬೆಲೆ ಲೀಟರ್ 60 ರೂ. ನಿಗದಿಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಅಂಜನಪ್ಪ, ಜಿ.ಪಂ.ಸದಸ್ಯ ವೆಂಕಟೇಶ್, ಅರುಣ್ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Discussion about this post