Read - < 1 minute
ರಾಜಕೀಯ ಸ್ವಾರ್ಥ, ವೋಟ್ ಬ್ಯಾಂಕ್ ರಾಜಕಾ ರಣ ಎಂಬ ಭೂತ ತಲೆಯಲ್ಲಿ ಹೊಕ್ಕರೆ ಹೀಗಾಗುತ್ತದೆ.
ಉರಿ ಸೆಕ್ಟರ್ ದಾಳಿ ಹಿನ್ನೆಲೆಯಲ್ಲಿ ಪಿಒಕೆಯಲ್ಲಿ ನುಗ್ಗಿ ಶತ್ರುಗಳನ್ನು ಅಟ್ಟಾಡಿಸಿ ಕೊಂದ ಭಾರತೀಯ ಸೇನೆಯ ಶೌರ್ಯದ ಬಗ್ಗೆ ಇಡಿಯ ವಿಶ್ವವೇ ನಿಬ್ಬೆರಗಾಗಿ ನೋಡು ತ್ತಿದೆ. ಸರ್ಜಿಕಲ್ ಸ್ಟ್ರೈಕ್ ಭಾರತೀಯರನ್ನು ಎದೆಯುಬ್ಬಿಸುವಂತೆ ಮಾಡಿದೆ. ಆದರೆ, ರಾಜಕೀಯ ನಾಯಕರ ಕೆಸರೆರಚಾಟ ಮಾತ್ರ ವೀರ ಯೋಧರಿಗೆ ಅವಮಾನ ಮಾಡುತ್ತಿದೆ ಎನ್ನುವುದನ್ನು ವಿಷಾಧದಿಂ ದಲೇ ಹೇಳಬೇಕಿದೆ.
ಆದರೆ, ಈ ದೇಶದ ಪ್ರಧಾನಿಯಾಗಿದ್ದ (ಅಚಾನಕ್ಕಾಗಿ) ಎಚ್.ಡಿ. ದೇವೇಗೌಡರೂ ಅಹ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಕೀಳಾಗಿ ಮಾತನಾಡು ತ್ತಾರೆ ಎಂದರೆ, ಇವರ ನೈತಿಕತೆಯೂ ತೀರಾ ವೋಟ್ ಬ್ಯಾಂಕ್ ಸರಕಾಗಿ ಮಾರ್ಪಟ್ಟಿದೆ ಎಂದಾಯಿತು.
ನಾವು ೧೯೬೫ ಹಾಗೂ ೧೯೭೧ರಲ್ಲಿ ಪಾಕಿಸ್ಥಾನದ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ನಡೆದಿದೆ. ಆದರೆ, ಈಗ ನಡೆದಿದ್ದು ಪೂರ್ಣ ಪ್ರಮಾಣದ ಯುದ್ಧ ವಲ್ಲ. ಹೀಗಾಗಿ, ಸರ್ಜಿಕಲ್ ಸ್ಟ್ರೈಕ್ ದೊಡ್ಡ ಸಾಧನೆಯಲ್ಲ ಎಂದಿದ್ದಾರೆ ದೇವೇಗೌಡರು. ನಿಜಕ್ಕೂ ಇಂತಹ ಮಾತನ್ನು ಮಾಜಿ ಪ್ರಧಾನಿಯೊಬ್ಬರು ಹೇಳಿದ್ದಾರೆ ಎಂದರೆ, ಇವರನ್ನು ಪ್ರಧಾನಿಯನ್ನಾಗಿ ಕಂಡ ಭಾರತ ತಲೆತಗ್ಗಿಸಬೇಕು.
ಈ ಹಿನ್ನೆಲೆಯಲ್ಲಿ ದೇವೇಗೌಡರ ರಾಜಕಾರಣ ವನ್ನೊಮ್ಮೆ ನೋಡುವುದಾದರೆ ಅವರೇನು ಸಾಧನೆ ಮಾಡಿದ್ದಾರೆ. ತಮ್ಮನ್ನು ರಾಜಕಾರಣದಲ್ಲಿ ಸಾಕಿ ಸಲುಹಿದ ರಾಮಕೃಷ್ಣ ಹೆಗಡೆಯವರನ್ನೇ ತುಳಿದು ಮೇಲೆ ಬಂದ ಗೌಡರು, ರಾಜಕೀಯವಾಗಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಂತೆ ಎಂದಿಗೂ ತಮ್ಮ ಪಕ್ಷವನ್ನು ಸಂಘಟಿಸಲಾಗಲಿಲ್ಲ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಾದ ವೇಳೆ ನೀನು ಸತ್ತ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡು ತ್ತೇನೆ ಎಂಬಂತೆ ಮಗನನ್ನು ಮುಂದಿಟ್ಟು ನೀಚ ರಾಜಕಾ ರಣ ಮಾಡಿ, ಮಾತು ತಪ್ಪಿದ ಅಪ್ಪ-ಮಗನಾದರು. ಕಾವೇರಿ ವಿಚಾರದಲ್ಲಿ ಮೊದಲು ನೀರು ಬಿಡಬೇಡಿ ಎಂದು, ಆಮೇಲೆ ನೀರು ಬಿಡಿ ಎಂದು ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿದ ಗೌಡರು, ಮಹದಾಯಿ ವಿಚಾರದಲ್ಲೂ ರಾಜ್ಯದ ಪರ ಹೋರಾಟ ಮಾಡದೇ, ಪ್ರಾಂತ್ಯ ರಾಜಕೀಯವನ್ನು ಪ್ರದರ್ಶಿಸಿದರು.
ತಮ್ಮ ರಾಜಕೀಯ ಹಾದಿಯ ಸಾಧನೆ ಇಂತಹ ಕಳೆಪೆ ಯಿಂದ ಕೂಡಿರುವಾಗ ಭಾರತೀಯ ಸೈನಿಕರ ಕುರಿ ತಾಗಿ ಮಾತನಾಡುವ ದೇವೇಗೌಡರಿಗೆ ಯಾವ ರೀತಿಯ ನೈತಿಕತೆ ಇದೆ ಎಂಬುದನ್ನು ಪ್ರಶ್ನಿಸಬೇಕಿದೆ.
ಅಚಾನಕ್ಕಾಗಿ ಪ್ರಧಾನಿ ಹುದ್ದೆಗೇರಿದ ದೇವೇಗೌಡರ ಸಾಧನೆ(?) ಎಂತಹದ್ದು ಇಡೀ ಕರ್ನಾಟಕ್ಕೇ ತಿಳಿದಿದೆ. ಮಾಜಿ ಪ್ರಧಾನಿ ಎಂಬ ಹಣೆಪಟ್ಟಿ ಹಚ್ಚಿಕೊಂಡು ಅದರ ಸಕಲ ಸವಲತ್ತುಗಳನ್ನು ಇಡೀ ಕುಟುಂಬವೇ ಅನುಭವಿ ಸುತ್ತಿರುವುದರ ಹಿಂದೆ ಈ ದೇಶದ ಸೈನಿಕರ ತ್ಯಾಗ ಹಾಗೂ ಬಲಿದಾನವಿದೆ ಎಂಬುದು ತಿಳಿದಿಲ್ಲವೇ?
ಉಗ್ರರ ಅಧಿಪತ್ಯ ಹೊಂದಿರುವ ಪಿಒಕೆಯಲ್ಲಿ ನುಗ್ಗಿ ಹೋರಾಡಿ ಶತ್ರುಗಳನ್ನು ಅಟ್ಟಾಡಿಸಿ ಕೊಂದು, ಭಾರತದ ದ್ರೋಹಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ ಯೋಧರ ಸಾಧನೆ ನಿಮ್ಮ ಕಣ್ಣಿಗೆ ಮಹತ್ಸಾಧನೆಯಲ್ಲ ಎಂದಾದರೆ ಅದು ನೀವು ಈ ದೇಶದ ಸೈನಿಕರಿಗೆ ಮಾಡುವ ಅವಮಾನವೇ ಹೌದು. ಬಹುಷಃ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಟೀಕಿಸುವ ಪಾಠದ ಭಾಗವಾಗಿ ದೇವೇಗೌಡರು ಈ ರೀತಿ ಮಾತನಾಡಿದ್ದರೆ, ಅದು ಅವರ ರಾಜಕೀಯ ನೈತಿಕ ದೀವಾಳಿತನವೇ ಆಗಿದೆ ಎನ್ನುವುದನ್ನು ವಿಷಾಧದಿಂದಲೇ ಹೇಳಬೇಕಿದೆ.
Discussion about this post