ನವದೆಹಲಿ, ಸೆ.2: ಕ್ರೀಡಾ ನಿರೂಪಕಿ ಮಾಯಾಂತಿ ಲ್ಯಾಂಗರ್ ತಮ್ಮ ಪತಿ ಸ್ಟುವರ್ಡ್ ಬಿನ್ನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದಕ್ಕೆ ವಾಪಸ್ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಮೊನ್ನೆ ಫ್ಲೊರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಒಂದೇ ಓವರ್ ನಲ್ಲಿ 32ರನ್ ನೀಡಿದ್ದರು. ಈ ಪಂದ್ಯದಲ್ಲಿ ಭಾರತ ಕೇವಲ 1 ರನ್ ಗಳಿಂದ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ನಲ್ಲಿ ನಿರೂಪಕಿ ಲ್ಯಾಂಗರ್ ಗೆ ಕ್ರಿಕೆಟ್ ಅಭಿಮಾನಿಗಳು ಪತಿ ಸ್ಟುವರ್ಡ್ ಬಿನ್ನಿಗೆ ವಿಚ್ಛೇದನ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಯಾಂತಿ ಲ್ಯಾಂಗರ್, ಈ ರೀತಿಯಾಗಿ ಟೀಕಿಸುತ್ತಿರುವುದರಿಂದ ನಾವು ಇನ್ನು ಚೆನ್ನಾಗಿರುತ್ತೇವೆ ಎಂದು ಹೇಳಿದ್ದಾರೆ. ನನಗೆ ಆತ್ಮೆಹತ್ಯೆ ಮಾಡಿಕೊಳ್ಳಿ ಸಲಹೆ ನೀಡಿರುವ ನಿಮಗೆ ನಾಚಿಕೆಯಾಗಬೇಕು. ಇದರ ಬದಲು ದುರಂತದಿಂದ ನೊಂದವರ ಬಗ್ಗೆ ಯೋಚನೆ ಮಾಡಿ ಎಂದು ಮಾಯಾಂತಿ ಲ್ಯಾಂಗರ್ ಸಲಹೆ ನೀಡಿದ್ದಾರೆ.
Discussion about this post