ಭಯೋತ್ಪಾದನೆ ಎನ್ನುವುದು ಜಾಗತಿಕ ಸಮಸ್ಯೆ ಯಾಗಿದೆ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯವೋ, ಅದರ ಸಂತ್ರಸ್ತ ರಾಷ್ಟ್ರಗಳಲ್ಲಿ ಎಲ್ಲರೂ ಪಾಲುದಾರರು ಎನ್ನು ವುದೂ ಅಷ್ಟೇ ಸತ್ಯ.
ಗೋವಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ಥಾನವನ್ನು ಭಯೋತ್ಪಾದನೆಯ ಕೇಂದ್ರಸ್ಥಾನ ಎಂದು ಟೀಕಿಸಿದ ಬೆನ್ನಲ್ಲೇ, ಪಾಕ್‌ನ ಆಪ್ತಮಿತ್ರ ಚೀನಾ ಪ್ರತಿಕ್ರಿಯೆ ನೀಡಿ, ಯಾವುದೇ ದೇಶ ಅಥವಾ ಧರ್ಮವನ್ನು ಉಗ್ರರ ಜೊತೆ ಸಂಪರ್ಕಿಸುವುದನ್ನು ವಿರೋಧಿಸುತ್ತೇವೆ. ಪಾಕಿಸ್ಥಾನದ ತ್ಯಾಗಗಳನ್ನು ಅಂತರ‌್ರಾಷ್ಟ್ರೀಯ ಸಮುದಾಯ ಪರಿಗಣಿಸಬೇಕು ಎಂದು ಹೇಳಿದೆ.
ಭಾರತದಿಂದ ಪ್ರತ್ಯೇಕವಾದ ಆರಂಭದಿಂದಲೂ ವಾಮಮಾರ್ಗ ಹಾಗೂ ದುಷ್ಟ ತಂತ್ರಗಳನ್ನೇ ಅನುಸರಿ ಸುತ್ತಾ ಬಂದಿರುವ ಪಾಕ್, ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆಯಾಗಿದೆ, ಎನ್ನುವುದು ಎಷ್ಟು ಸ್ಪಷ್ಟವೋ, ತಾನೇ ಹುಟ್ಟಿಸಿದ ಪಾಪದ ಕೂಸು ಇಂದು ತನ್ನನ್ನೇ ಬಲಿ ಪಡೆಯುತ್ತಿದೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ, ಚೀನಾ ಹೇಳಿದಂತೆ ಪಾಕ್ ಎಂದಿಗೂ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಲು ಸಾಧ್ಯವಿಲ್ಲ.
ಇನ್ನು, ಚೀನಾ ಹೇಳಿದಂತೆ ಭಯೋತ್ಪಾದನೆಯನ್ನು ಒಂದು ರಾಷ್ಟ್ರ ಅಥವಾ ಧರ್ಮದೊಂದಿಗೆ ತಳುಕು ಹಾಕುವ ವಿಚಾರವನ್ನು ನೋಡುವುದಾದರೆ, ಜಗತ್ತಿನಲ್ಲಿ ಭಯೋತ್ಪಾದನೆ ಎಂಬ ರಾಕ್ಷಸೀ ಮಗುವನ್ನು ಸೃಷ್ಠಿ ಸಿದ್ದು, ಇದೇ ಇಸ್ಲಾಂ ರಾಷ್ಟ್ರಗಳು. ಉಗ್ರವಾದವನ್ನು ಧರ್ಮದೊಂದಿಗೆ ತಳುಕುಹಾಕಬಾರದು ಎಂಬ ಮಾತನಾಡುವ ಮುನ್ನ ಒಂದು ಅಂಶವನ್ನು ತಿಳಿಯ ಬೇಕು. ಜಗತ್ತಿನ ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ, ಭಯೋತ್ಪಾದಕರೆಲ್ಲರೂ ಮುಸ್ಲಿಮರೇ ಎನ್ನು ವುದು ಸತ್ಯ ಎನ್ನುವುದಕ್ಕೆ ಜಗತ್ತಿಗೆ ಮಾರಕವಾಗಿ ಕಾಡು ತ್ತಿರುವ ಐಎಸ್‌ಐಎಸ್, ಲಷ್ಕರ್ ಎ ತೊಯ್ಬಾ, ಇಂಡಿ ಯನ್ ಮುಜಾಹಿದ್ದೀನ್, ಬೋಕೋ ಹರಾಮ್ ನಂತಹ ಸಂಘಟನೆಗಳೇ ಸಾಕ್ಷಿ.
ಈ ಎಲ್ಲಾ ಉಗ್ರ ಸಂಘಟನೆಗಳ ಧ್ಯೇಯವೂ ಒಂದು. ಅದು, ಇಸ್ಲಾಂ ಪ್ರಪಂಚವನ್ನಾಗಿಸುವುದು. ಇದ ರೊಂದಿಗೆ, ಪಾಕಿಸ್ಥಾನ ಉಗ್ರರನ್ನು ತಯಾರು ಮಾಡುವ ರಾಷ್ಟ್ರ ಎಂಬುದು ಜಾಗತಿಕ ಮಟ್ಟದಲ್ಲಿ ಈಗಾಗಲೇ ಸಾಬೀತಾಗಿದ್ದು, ಉಗ್ರವಾದ ಎಂಬ ಪಾಪದ ಕೂಸು ಎನ್ನುವುದಕ್ಕೆ ತಾನೇ ಹುಟ್ಟಿಸಿದ ಉಗ್ರರು ತಮ್ಮನ್ನೇ ಕೊಲ್ಲುತ್ತಿರುವುದೇ ಸಾಕ್ಷಿ. ಹೀಗಾಗಿ, ಭಯೋತ್ಪಾದನೆ ಯಲ್ಲಿ ಧರ್ಮ ಹಾಗೂ ದೇಶದೊಂದಿಗೆ ತಳುಕು ಹಾಕಿ ನೋಡಿದಾಗ ಮಾತ್ರ ಏನಾದರೂ ಸಾಧ್ಯ.
ಆದರೆ, ಕಮ್ಯುನಿಸ್ಟ್ ಸಿದ್ಧಾಂತವನ್ನು ವಂಶವಾಹಿ ಯಲ್ಲೇ ಹೊಂದಿರುವ ಚೀನಾ, ಪಾಕಿಸ್ಥಾನವನ್ನು ಸಮರ್ಥಿಸಿಕೊಳ್ಳುತ್ತಾ, ಭಯೋತ್ಪಾದನೆಯನ್ನು ಪರೋಕ್ಷವಾಗಿ ಒಪ್ಪಿಟ್ಟುಕೊಳ್ಳುತ್ತಿದೆ ಎನ್ನುವುದು ಒಂದೆಡೆಯಾದರೆ, ಭಾರತದ ಅಭಿವೃದ್ಧಿ ತನಗೆ ಎಂದಿಗೂ ಮುಳುವು ಎಂಬ ಆತಂಕದಿಂದ ಪಾಕಿಸ್ಥಾನವನ್ನು ಬೆಂಬ ಲಿಸುತ್ತಾ ಭಾರತಕ್ಕೆ ಹೊಡೆತ ನೀಡಲು ಯತ್ನಿಸುತ್ತಿದೆ. ಆದರೆ, ಭಾರತಕ್ಕೆ ಜಾಗತಿಕ ಮಟ್ಟದ ಬೆಂಬಲ ಇದೆ ಎನ್ನು ವುದನ್ನು ಚೀನಾ ಅರಿಯದೇ ಹೋದರೆ ಈಗ ಪಾಕ್‌ಗೆ ಆಗಿರುವ ಗತಿಯೇ ಮುಂದೇ ಚೀನಾಕ್ಕೂ ಆಗುವ ದಿನಗಳು ದೂರವಿಲ್ಲ.
Discussion about this post