ಲಕ್ನೋ , ಅ.24: ನೂತನ ಪಕ್ಷ ಸಾಧನೆ ಮಾಡುವುದಿಲ್ಲ. ಸಮಾಜವಾದಿ ಪಕ್ಷ ಒಡೆಯಲು ಅವಕಾಶ ನೀಡುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಹೇಳಿದ್ದಾರೆ.
ಇಂದು ಲಕ್ನೋದಲ್ಲಿನ ಸಮಾಜವಾದಿ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ನನ್ನ ತಂದೆಯೇ ನನಗೆ ರಾಜಕೀಯ ಗುರು. ಕಷ್ಟ-ಸುಖ ಎರಡರಲ್ಲೂ ನಾನು ನನ್ನ ತಂದೆಯೊಂದಿಗೆ ಜೊತೆಗಿದ್ದೇನೆ. ಸಮಾಜವಾದಿ ಪಕ್ಷ ಇಬ್ಟಾಗವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊರಗಿನಿಂದ ಬಂದ ಅಮರ್ ಸಿಂಗ್ ಪಕ್ಷದೊಳಗಿನ ಒಡಕು, ಭಿನ್ನಮತ, ಒಳಜಗಳಗಳಿಗೆ ಕಾರಣರಾಗಿದ್ದಾರೆ . ಅಮರ್ ಸಿಂಗ್ ಸಹಿತ ಯಾರ ವಿರುದ್ಧ ವೂ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು.
Discussion about this post