Read - < 1 minute
ಇಂಫಾಲ, ಅ.18: ಮಣಿಪುರ ಸಶಸ್ತ್ರದಳದ ವಿಶೇಷಾಧಿಕಾರ ಕಾನೂನನ್ನು (ಎಎಫ್ಎಸ್ಪಿಎ) ವಾಪಸ್ ಪಡೆಯಲು ಆಗ್ರಹಿಸಿ 16 ವರ್ಷಗಳ ಸುದೀರ್ಘ ಉಪವಾಸ ಹೋರಾಟ ನಡೆಸಿದ್ದ, ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ತಮ್ಮ ನೂತನ ಪಕ್ಷ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟ(ಪಿಆರ್ ಜೆಎ)ಗೆ ಚಾಲನೆ ನೀಡಿದ್ದಾರೆ.
ಇಂಫಾಲ್ ನಲ್ಲಿ ತಮ್ಮ ನೂತನ ರಾಜಕೀಯ ಪಕ್ಷ ಪಿಆರ್ ಜೆಎ ಗೆ ಚಾಲನೆ ನೀಡುವ ಮೂಲಕ ಇರೋಮ್ ಶರ್ಮಿಳಾ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಎರೆಂಡ್ರೊ ಲಿಚೊನ್ ಬಾಮ್ ಅವರು ಈ ಪಕ್ಷದ ಸಂಚಾಲಕರಾಗಿದ್ದು, ಇರೋಮ್ ಶರ್ಮಿಳಾ ಅವರು ಸಹ ಸಂಚಾಲಕಿಯಾಗಿದ್ದಾರೆ.
ಮುಂದಿನ ವರ್ಷ ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. 16 ವರ್ಷಗಳ ನಂತರ ಕಳೆದ ಆಗಸ್ಟ್ 9ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದ ಶರ್ಮಿಳಾ, ತಾವು ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ತಮ್ಮ ಹೋರಾಟ ಮುಂದುವರೆಸುವುದಾಗಿ ಹೇಳಿದ್ದರು.
Discussion about this post