Read - < 1 minute
ಮಂಡ್ಯ: ಸೆ:10: ಕಾವೇರಿ ನೀರನ್ನು ನಂಬಿ ಬೆಳೆಗಳನ್ನು ನಾಟಿ ಮಾಡಿರುವ ಈ ಭಾಗದ ರೈತರಿಗೆ ಸಕರ್ಾರ ನ್ಯಾಯಯುತ ಪರಿಹಾರ ಈ ಕ್ಷಣದಲ್ಲೇ ಘೋಷಿಸಿದರೆ, ಕಾವೇರಿ ಹೋರಾಟ ಹಿಂಪಡೆಯುತ್ತೇವೆ ಎಂದು ಮಾಜಿ ಸಚಿವ ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಹರಿಸುತ್ತಿರುವ ಸುಪ್ರೀಂ ಆದೇಶ ಖಂಡಿಸಿ ಹಾಗೂ ನೀರು ಬಿಟ್ಟಿರುವ ರಾಜ್ಯ ಸಕರ್ಾರದ ಕ್ರಮದ ವಿರುದ್ಧ ಕಳೆದ ಸೋಮವಾರದಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಭಾಗದ ಜನರಿಗೆ ನ್ಯಾಯ ಒದಗಿಸುವಲ್ಲಿ ರಾಜ್ಯ ಸಕರ್ಾರ ವಿಫಲವಾಗಿದೆ ಎಂದು ಅವರು ದೂರಿದರು.
ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಚ್ಚು ಇಂದೂ ಮುಂದುವರೆದಿದ್ದು, ರಾಜ್ಯ ಸಕರ್ಾರ ಈ ಕೂಡಲೇ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿ ಸಿಲುಕಿರುವ ಈ ಭಾಗದ ಅನ್ನದಾತರಿಗೆ ಸೂಕ್ತ ಪರಿಹಾರ ನೀಡಿದ್ದೆ ಆದಲ್ಲಿ ತಕ್ಷಣವೇ ಪ್ರತಿಭಟನೆ ಹಿಂಪಡೆಯಲಿದ್ದೇವೆ ಎಂದರು.
Discussion about this post