Read - < 1 minute
ಇಂದೋರ್: ನಾಯಕನ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಶತಕ ಹೊಡೆದರು. ಭಾರತ 3 ವಿಕೆಟ್ ನಷ್ಟಕ್ಕೆ 267ರನ್ ಪೇರಿಸಿ ಗೌರವ ಮೊತ್ತ ಸಂಪಾದಿಸಿದೆ.
ಶನಿವಾರ ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಆದರೆ ನಿರೀಕ್ಷೆಯಂತೆ ವಿರಾಟ್ ಪಡೆ ಉತ್ತಮ ಆರಂಭ ಪಡೆಯಲಿಲ್ಲ. ಕಠಿಣ ಪಿಚ್ನಲ್ಲಿ ಆರಂಭಿಕರಾದ ಮುರಳಿ ವಿಜಯ್(10) ಮತ್ತು ಗೌತಮ್ ಗಂಭೀರ್ ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ವಿರಟ್ ಕೊಹ್ಲಿ ಜೊತೆಗೂಡಿದ ಚೇತೇಶ್ವರ ಪೂಜಾರ ಕೆಲವೊತ್ತು ಕ್ರೀಸ್ ನಲ್ಲಿ ನಿಂತು ವಿಕೆಟ್ ಬೀಳದಂತೆ ನೋಡಿಕೊಂಡರು. ಆದರೆ ಅರ್ಧ ಶತಕದತ್ತ ಮುನ್ನಗುತ್ತಿದ್ದ ಪೂಜಾರ ಸಾಂಟ್ನರ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ರಹಾನೆ ಆಗಮಿಸಿ ನಾಯಕನಿಗೆ ಉತ್ತಮ ಸಾಥ್ ನೀಡಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದರು. ವಿರಾಟ್ ಕೊಹ್ಲಿ 191 ಎಸೆತದಲ್ಲಿ 10 ಬೌಂಡರಿ ಹೊಡೆದು ಅಜೇಯ 103 ರನ್ ಮತ್ತು ಅಜಿಂಕ್ಯ ರಹಾನೆ 172 ಎಸೆತದಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ ಅಜೇಯ 79ರನ್ ಸಿಡಿಸಿದ್ದಾರೆ.
Discussion about this post