ನವದೆಹಲಿ: ಅ:28: ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 11 ಮತ್ತು 12 ರಂದು ಜಪಾನ್ಗೆ 2 ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ.
ತಮ್ಮ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಜಪಾನ್ ಚಕ್ರವರ್ತಿ ಅಖಿಹಿತೊ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಧಾನಿ ಶಿಂಜೊ ಅಭೆ ಅವರೊಂದಿಗೆ ವಾರ್ಷಿಕ ಶೃಂಗಸಭೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತುಅವರ ಜಪಾನಿ ಸಹವರ್ತಿ ನಡುವೆ ನಡೆಯುತ್ತಿರುವ 3ನೇ ವಾರ್ಷಿಕ ಶೃಂಗಸಭೆ ಇದಾಗಿದೆ. ಈ ಸಭೆಯಲ್ಲಿ ಇಬ್ಬರೂನಾಯಕರು, ದ್ವಿಪಕ್ಷೀಯ, ಪ್ರಾಂತೀಯ ಹಾಗೂ ಜಾಗತಿಕ ಸಂಗತಿಗಳನ್ನು ಪರಸ್ಪರ ಹಿತಾಸಕ್ತಿಯ ಹಿನ್ನೆಲೆಯಲ್ಲಿವ್ಯಾಪಕವಾಗಿ ಸಮಾಲೋಚಿಸುವರು. ಭಾರತ ಮತ್ತು ಜಪಾನ್ ನಡುವೆ ವಿಸೃತವಾದ ಪಾಲುದಾರಿಕೆ ಮತ್ತುಬಾಂಧ್ಯವಗಳನ್ನು ರೂಢಿಸಿಕೊಳ್ಳಲು ಈ ಸಭೆ ವಿಫಲ ಅವಕಾಶ ಕಲ್ಪಿಸಿದೆ.
Discussion about this post