Read - < 1 minute
ನವದೆಹಲಿ, ಅ.9: ಜಮ್ಮು ಕಾಶ್ಮೀರದ ನೌಗಮ್ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾದ ಗ್ರೆನೇಡ್ ಗಳು ಪಾಕಿಸ್ಥಾನದ್ದಾಗಿವೆ ಎಂದು ಭಾರತೀಯ ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 6ರಂದು ನೌಗಮ್ ಸೆಕ್ಟರ್ ನಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆ ಪ್ರವೇಶಿಸಲು ಯತ್ನಿಸುತ್ತಿದ್ದ ನಾಲ್ವರು ಉಗ್ರರರನ್ನು ಭಾರತೀಯ ಸೇನೆ ಹೊಡೆದುರಿಳಿಸಿತ್ತು. ಈ ವೇಳೆ ಉಗ್ರರಿಂದ ವಶಪಡಿಸಿಕೊಳ್ಳಲಾದ ಹ್ಯಾಂಡ್ ಗ್ರೆನೇಡ್ ಹಾಗೂ ಯುಬಿಜಿಎಲ್ ಗ್ರೆನೇಡ್ ಗಳ ಮೇಲೆ ಪಾಕಿಸ್ತಾನ ಕಂಪನಿಯ ಗುರುತುಗಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಉಗ್ರರಿಂದ ವಶಪಡಿಸಿಕೊಳ್ಳಲಾದ ಔಷಧಿ ಹಾಗೂ ಆಹಾರ ಪದಾರ್ಥಗಳ ಮೇಲೆಯೂ ಪಾಕ್ ಮೂಲದ ಕಂಪನಿಗಳ ಗುರುತಗಳಿವೆ ಎಂದು ಅವರು ಹೇಳಿದ್ದಾರೆ. ಆರು ಗ್ರೆನೇಡ್, ಆರು ಪ್ಲಾಸ್ಟಿಕ್ ಸ್ಫೋಟಕಗಳು, ಆರು ಪೆಟ್ರೋಲಿಯಂ ಜೆಲ್ಲಿ ಬಾಟಲಿ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ಸೇನೆ ಜಪ್ತಿ ಮಾಡಿತ್ತು.
Discussion about this post