Read - < 1 minute
ಮುಜಾಫರಾಬಾದ್, ಅ.೬: ಭಾರತ-ಪಾಕಿಸ್ಥಾನ ನಡುವಿನ ಕಾದಾಟ ತಾರಕ್ಕೇರಿದ್ದು, ಜಾಗತಿಕ ಮಟ್ಟದಲ್ಲಿ ಪಾಕ್‌ಗೆ ಮುಖಭಂಗವಾಗಿರುವ ಬೆನ್ನಲ್ಲೇ, ಪಿಒಕೆಯಲ್ಲಿ ವಾಸಿಸುತ್ತಿರುವ ನಾಗರಿಕರು ಪಾಕ್ ವಿರುದ್ಧ ತಿರುಗಿಬಬಿದ್ದಿದ್ದಾರೆ.
ಪಾಕ್ ಹಾಗೂ ಭಯೋತ್ಪಾದಕ ಸಂಘಟನೆಗಳು ವಿರುದ್ಧ ಸ್ಥಳೀಯ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪಾಕ್ ವಿರುದ್ಧ ಹರಿಹಾಯ್ದಿದ್ದಾರೆ. ಪಿಓಕೆಯ ಮುಜಫ್ರಾಬಾದ್‌ನ ಸ್ಥಳೀಯ ನಾಯಕನೋರ್ವ, ನಿಷೇಧಿತ ಉಗ್ರ ಸಂಘಟನೆಗಳಿಗೆ ಹಾಗೂ ಅವುಗಳ ಉಗ್ರರ ಶಿಬಿರಗಳಿಗೆ ಆಹಾರ ಮತ್ತು ರೇಶನ್ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ ಎಂದು ಹೇಳುವ ಮೂಲಕ ಪಾಕ್ ಸರಕಾರದ ಮುಖವಾಡವನ್ನು ಕಳಚಿದ್ದಾನೆ.
ಉಗ್ರರ ಶಿಬಿರಗಳಿಂದಾಗಿ ತಮ್ಮ ಬದುಕು ನರಕಸದೃಶವಾಗಿದೆ ಎಂದು ಪಿಓಕೆಯ ಮುಜಫ್ರಾಬಾದ್, ಕೋಟ್‌ಲಿ, ಚಿನಾರಿ, ಮೀರ್‌ಪುರ್, ಗಿಲ್‌ಗಿಟ್, ದಿಯಾಮರ್ ಮತ್ತು ನೀಲಂ ಕಣಿವೆಯ ಜನರು ಬೀಗಿಗಿಳಿದು ಪಾಕ್ ಸರ್ಕಾರವನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ.
ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದಕ ಕ್ಯಾಂಪ್‌ಗಳಲ್ಲಿ ತರಬೇತಿ ಪಡೆಯುವವರು ಸ್ಥಳಿಯ ಹಳ್ಳಿಗಳು ಲೂಟಿ ಹೊಡೆಯುತ್ತಾರೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಐಎಸ್‌ಐ ಉಗ್ರರ ತರಬೇತಿಗೆ ಹಾಗೂ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಜನತೆ ಆರೋಪಿಸಿದ್ದಾರೆ. ಪಾಕಿಸ್ಥಾನ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ತರಬೇತಿ ಕ್ಯಾಂಪ್‌ಗಳನ್ನು ಸ್ಥಗಿತಗೊಳಿಸದೇ ಇದ್ದರೆ, ನಾವೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಾಕ್ ಆಕ್ರಮಿತ ಕಾಶ್ಮೀರ ನಾಯಕರು ಎಚ್ಚರಿಕೆ ನೀಡಿದ್ದಾರೆ.
Discussion about this post