ನವದೆಹಲಿ, ಅ.5: ಉರಿ ಸೆಕ್ಟರ್ ದಾಳಿ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ ಭಾರತೀಯ ಸೇನೆ ಕಳೆದ ವಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಸಾಕ್ಷಿಗಳನ್ನು ಒದಗಿಸುವಂತೆ ಕೇಳುತ್ತಿರುವ ಬೆನ್ನಲ್ಲೇ, ಈ ಕಾರ್ಯಾಚರಣೆಯಲ್ಲಿ ಪ್ರತ್ಯಕ್ಷವಾಗಿ ಕಂಡ ವ್ಯಕ್ತಿಗಳು ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ವಿಸ್ತೃತ ವರದಿ ಪ್ರಕಟ ಮಾಡಿದೆ. ಭಾರತೀಯ ಸೇನೆಯು ಸರ್ಜಿಕಲ್ ಸ್ಟೈಕ್ ಬಗ್ಗೆ ರಹಸ್ಯ ವರದಿಯನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಿದೆ. ಭಾರತೀಯ ಯೋಧರು ನಡೆಸಿದ ದಾಳಿಯ ವಿವರಗಳನ್ನು ಸೇನಾ ಪಡೆಯ ಡಿಜಿಎಂಓ ಅವರು ಮರುದಿನ ಮಾಧ್ಯಮಕ್ಕೆ ನೀಡಿದ್ದಾರೆ.
ದಾಳಿ ನಡೆದ ಪ್ರದೇಶದಲ್ಲಿ ಹತರಾದ ಉಗ್ರರ ಶವಗಳನ್ನು ಗೌಪ್ಯವಾಗಿ ಸಂಸ್ಕಾರ ಮಾಡಲು ಟ್ರಕ್‌ಗೆ ತುಂಬಿಸಲಾಗುತ್ತಿತ್ತು ಎಂಬ ವಿಚಾರವನ್ನು ಸಾಕ್ಷಿಗಳು ವಿವರಿಸಿದ್ದಾರೆ. ಕೆಲವು ದೇಹಗಳನ್ನು ಅದೇ ಸ್ಥಳದಲ್ಲಿ ಸಂಸ್ಕಾರ ಮಾಡಲಾಯಿತು ಎಂದು ಹೇಳಿರುವ ಸಾಕ್ಷಿಗಳು, ಈ ದಾಳಿಯಲ್ಲಿ ಮೃತರಾದವರು ಪಾಕಿಸ್ಥಾನ ಹಾಗೂ ಐಎಸ್‌ಐ ಬೆಂಬಲಿಗರು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಸೇನೆ ಹಾಗೂ ಉಗ್ರರ ನಡುವೆ ಭಾರೀ ಪ್ರಮಾಣದಲ್ಲಿ ಗುಂಡಿನ ಕಾಳಗ ನಡೆದಿದ್ದು, ಉಗ್ರರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಮನೆಗಳನ್ನು ಸೇನೆ ನಾಶಪಡಿಸಿದ್ದನ್ನು ಕಂಡಿದ್ದೇವೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ.
ಗಡಿ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ದಾಟಿ ಭಾರತದೊಳಗೆ ನುಸುಳುವ ಉಗ್ರರಿಗೆ ಪಿಒಕೆಯಲ್ಲಿ ಲಷ್ಕರ್ ಉಗ್ರ ಸಂಘಟನೆ ಅವಶ್ಯಕ ಸಾಮಾನು ಸರಂಜಾಮುಗಳನ್ನು ಪೂರೈಸುತ್ತದೆ. ಈ ಎಲ್ಲ ಕೆಲಸ ಅಲ್ ಹಾವಿ ಸೇತುವೆ ಮೂಲಕ ನಡೆಯುತ್ತದೆ. ಇದನ್ನು ನಾವು ಕಂಡಿದ್ದೇವೆ. ಈ ಸೇತುವೆ ಸಮೀಪ ಉಗ್ರರು ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅದನ್ನೂ ಸೇನೆ ನಾಶ ಪಡಿಸಿದೆ ಎಂದು ಹೇಳಿದ್ದಾರೆ.
ಈ ನಡುವೆ ಭಾರತೀಯ ಸೇನೆಯು ಸರ್ಜಿಕಲ್ ಸ್ಟೈಕ್‌ನ ವಿಡಿಯೋವನ್ನು ತಾನು ಚಿತ್ರೀಕರಿಸಿಕೊಂಡಿದ್ದು ಅದನ್ನು ಸರ್ಕಾರಕ್ಕೆ ಸಲ್ಲಿಸಲು ತಾನು ಸಿದ್ದನಿದ್ದೇನೆ ಎಂದು ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಚಿದಂಬರಂ, ಸಂಜಯ್ ನಿರುಪಮ್ ಮುಂತಾದವರು ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ಸ್ಟೈಕ್ ಬಗ್ಗೆ ಸರಕಾರದ ಬಳಿ ಪುರಾವೆ ಕೇಳಿದ್ದಾರೆ. ಸರಕಾರ ಸರ್ಜಿಕಲ್ ಸ್ಟೈಕ್ ಬಗ್ಗೆ ಪುರಾವೆ ಒದಗಿಸುವ ತನಕವೂ ಸೇನೆ ನಡೆಸಿರುವ ಈ ಸೀಮಿತ ದಾಳಿಯನ್ನು ತಾನು ನಕಲಿ ಎಂದು ಪರಿಗಣಿಸುವುದಾಗಿ ಸಂಜಯ್ ನಿರುಪಮ್ ನೇರವಾಗಿ ಹೇಳಿದ್ದಾರೆ.
ಭಾರತದ ಪ್ಯಾರಾ ಮಿಲಿಟರಿ ಕಮಾಂಡೋಗಳು ಸೆ.೨೮-೨೯ರ ನಡುವಿನ ರಾತ್ರಿ ಪಿಓಕೆಯಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟೈಕ್‌ನಲ್ಲಿ ಸುಮಾರು ೩೦ರಿಂದ ೭೦ ಉಗ್ರರು ಹಾಗೂ ೯ ಪಾಕ್ ಸೈನಿಕರು ಹತರಾಗಿದ್ದರು.
ಮಾನ ಉಳಿಸಿಕೊಳ್ಳಲು ಇನ್ನೂ ಪಾಕ್ ಹೋರಾಟ
ಗಡಿ ಭಾಗದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಲ್ಲಿ ೩೮ಕ್ಕೂ ಅಧಿಕ ಉಗ್ರರು ಹತರಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ತನಗೆ ಆಗಿರುವ ಅವಮಾನವನ್ನು ಸರಿಪಡಿಸಿಕೊಳ್ಳಲು ಪಾಕ್ ಇನ್ನೂ ಪ್ರಯತ್ನಿಸುತ್ತಲೇ ಇದೆ.
ಭಾರತೀಯ ಸೇನೆಯ ಈ ದಾಳಿಯಲ್ಲಿ ಯಾವೊಬ್ಬ ಪಾಕಿಸ್ಥಾನಿಯೂ ಸಾವನ್ನಪ್ಪಿಲ್ಲ ಎನ್ನುವುದನ್ನು ಉನರುಚ್ಚರಿಸಿರುವ ಪಾಕ್, ಇವೆಲ್ಲವೇ ಮಾಧ್ಯಮಗಳಲ್ಲಿ ಆಗಿರುವ ಉತ್ಪ್ರೇಕ್ಷೆಯಷ್ಟೆ ಎಂದಿದೆ.
ಭಾರತದ ಸೀಮಿತ ದಾಳಿಯ ವಿಚಾರದಲ್ಲಿ ಭಾರತೀಯ ಸೇನೆಯು ಸರ್ಜಿಕಲ್ ಸ್ಟೈಕ್‌ನ ವಿಡಿಯೋವನ್ನು ತಾನು ಚಿತ್ರೀಕರಿಸಿಕೊಂಡಿದ್ದು ಅದನ್ನು ಸರ್ಕಾರಕ್ಕೆ ಸಲ್ಲಿಸಲು ತಾನು ಸಿದ್ದನಿದ್ದೇನೆ ಎಂದು ಹೇಳಿದೆ.
Discussion about this post