ನವದೆಹಲಿ:ಆ:30: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಪು ನಿಯಂತ್ರಣಕ್ಕೆ ಬಳಸಲಾಗುವ ಪೆಲ್ಲೆಟ್ ಗನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಅವುಗಳನ್ನು ತೀರಾ ವಿರಳ ಪ್ರಕರಣಗಳಲ್ಲಿ ಬಳಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ಭದ್ರತಾ ಪಡೆಗಳೊಂದಿಗೆ ಚಚರ್ಿಸಿದ ಬಳಿಕ ಸಂಬಂಧಿಸಿದ ಹಿರಿಯ ಸಕರ್ಾರಿ ಇಲಾಖೆ ಅಧಿಕಾರಿಗಳು ಈ ನಿಧರ್ಾರವನ್ನು ತಳೆದಿವೆ. ಪೆಲ್ಲೆಟ್ ಗನ್ ಉಪಯೋಗಿಸುವ ಆಯ್ಕೆ ಉಳಿದುಕೊಳ್ಳಲಿದೆ ಆದರೆ ಅದರ ಬಳಕೆ ವಿರಳಾತಿ ವಿರಳ ಪ್ರಕರಣಗಳಲ್ಲಿ ನಡೆಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಜುಲೈ 8 ರಂದು ಹಿಜಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಬುಹರ್ಾನ್ ವಾನಿ ಹತ್ಯೆ ನಂತರ ನಡೆದ ಕಾಶ್ಮೀರ ಗಲಭೆ-ಪ್ರತಿಭಟನೆ ಮತ್ತು ಹಿಂಸೆಯಲ್ಲಿ ಗುಂಪು ನಿಯಂತ್ರಣಕ್ಕೆ ಭದ್ರತಾ ಪಡೆಗಳು ಪೆಲ್ಲೆಟ್ ಗನ್ ಗಳನ್ನು ಬಳಸಿದ್ದ ಪರಿಣಾಮ ನಾಗರಿಕರಿಗೆ ದೊಡ್ಡ ಮಟ್ಟದ ಗಾಯಗಳಾಗಿದ್ದರಿಂದ ಸಕರ್ಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ಆಗಸ್ಟ್ 24-25 ರಂದು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪೆಲ್ಲೆಟ್ ಗನ್ ಗಳ ಬದಲಿಗೆ ಬೇರೆ ಮಾರ್ಗಗಳನ್ನು ಭದ್ರತಾ ಪಡೆಗಳಿಗೆ ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು ಎಂಬ ಭರವಸೆ ನೀಡಿದ್ದರು.
ಗೃಹ ಸಚಿವಾಲಯ ರಚಿಸಿದ್ದ ತಜ್ಞರ ಸಮಿತಿ ಪೆಲ್ಲೆಟ್ ಗನ್ ಗಳ ಬದಲಾಗಿ ಖಾರದ ಪುಡಿ ಆಧಾರಿತ ‘ಪಾವ ಶೆಲ್’ ಗಳನ್ನು ಬಳಸಲು ಅನುಮೋದನೆ ನೀಡಲಿದೆ ಎಂದು ತಿಳಿಯಲಾಗಿತ್ತು. ಸಮಿತಿ ಇದರ ಪ್ರಯೋಗವನ್ನು ಕೂಡ ನಡೆಸಿತ್ತು. ಈ ಪಾವ ಶೆಲ್ ಗಳ ಮಾರಾಣಾಂತಿಕವಾಗಿರದೆ ಗುರಿಯನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲು ಸಹಕಾರಿಯಾಗಿದೆ.
Discussion about this post