Read - < 1 minute
ಚೆನ್ನೈ, ಅ.5: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಚೆನ್ನೈನಲ್ಲಿ ಮುಂದಿನ ತಿಂಗಳು ಮೆರವಣಿಗೆ ನಡೆಸಲಿದ್ದು, ಈ ಮೆರವಣಿಗೆಯಲ್ಲಿ ಫುಲ್ ಪ್ಯಾಂಟ್ ಧರಿಸಬಹುದು. ಆದರೆ, ಕೈಯಲ್ಲಿ ಲಾಠಿ ಹಿಡಿಯಕೂಡದು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಈ ತನಕ ಕಾಣಿಸಿಕೊಂಡಿಲ್ಲದ ಆರ್‌ಎಸ್‌ಎಸ್ ಸಂಘಟನೆ ಈ ಬಾರಿಯ ವಿಜಯದಶಮಿಯಂದು ರಾಜ್ಯದಲ್ಲಿ ಕನಿಷ್ಠ ೧೪ ಕಡೆಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದೆ.
ಈ ಮೆರವಣಿಗೆಗಳಲ್ಲಿ ತಲಾ ೨೦೦ ರಿಂದ ೩೦೦ ಮಂದಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಕನ್ಯಾಕುಮಾರಿ ಮತ್ತು ಕೊಯಮುತ್ತೂರಿನಲ್ಲಿ ಸುಮಾರು ೨,೦೦೦ ಆರ್‌ಎಸ್‌ಎಸ್ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾನೂನು, ಶಿಸ್ತು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಮುಂದೊಡ್ಡಿ ತಮಿಳು ನಾಡು ಪೊಲೀಸರು ಆರ್‌ಎಸ್‌ಎಸ್‌ನ ವಿಜಯದಶಮಿ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರು.
ಆದರೆ ರಾಜ್ಯ ಹೈಕೋರ್ಟ್ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದೆ. ಹಾಗಿದ್ದರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆರ್‌ಎಸ್‌ಎಸ್ ಸದಸ್ಯರು ಫ್‌ುಲ್ ಪ್ಯಾಂಟ್ ಧರಿಸಿರಬೇಕು ಮತ್ತು ಕೈಯಲ್ಲಿ ಲಾಠಿ ಹಿಡಿದಿರಬಾರದು ಎಂದು ತಾಕೀತು ಮಾಡಿದೆ.
Discussion about this post