Read - < 1 minute
ಬೆಂಗಳೂರು: ಭದ್ರತೆ ಹೆಸರಿನಲ್ಲಿ ಪ್ಯಾರಾಒಲಿಂಪಿಯನ್ ಗೆ ತನ್ನ ಕಾಲಿಗೆ ಅಳವಡಿಸಿದ್ದ ಕೃತಕ ಕಾಲನ್ನು ಭದ್ರತಾ ಸಿಬ್ಬಂದಿ ಬಿಚ್ಚಿಸಿ ಗಾಯಗೊಳಿಸಿರುವ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಪ್ಯಾರಾ ಸೈಕ್ಲಿಸ್ಟ್ ಆದಿತ್ಯ ಮೆಹ್ತಾ ಮಂಗಳವಾರವ ತುರ್ತಾಗಿ ವಿಮಾನದಲ್ಲಿ ಪ್ರಯಾಣ ಬೆಳಸಬೇಕಿತ್ತು. ಕೇಂದ್ರ ಇಂಡಸ್ಟ್ರಿಯಲ್ ಭದ್ರತಾ ಪಡೆ ಆದಿತ್ಯ ಅವರ ಕಾಲಿಗೆ ಅಳವಡಿಸಿದ ಪ್ರಸ್ಥೆಟಿಕ್ ಅಂಗವನ್ನು ಬಿಚ್ಚಲು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೆಹ್ತಾ ಬೇಸರಗೊಂಡಿದ್ದಾರೆ. ಕೊನೆಗೆ ವಿಧಿಯಿಲ್ಲದೇ ಪ್ರಾಸ್ತೆಟಿಕ್ ಕಾಲು ತೆಗೆದಿದ್ದಾರೆ. ನಂತರ ಆದಿತ್ಯ ಮೆಹ್ತಾ ಮೆನೆಗೆ ತೆರೆಳಿ ಕೃತಕ ಕಾಲನ್ನು ಬಿಚ್ಚಿ ನೋಡಿದಾಗ ರಕ್ತ ಹರಿಯುತಿತ್ತು ಎಂದು ಬೇಸರದಿಂದ ಹೇಳಿದ್ದಾರೆ.
ಆದಿತ್ಯ ಮೆಹ್ತಾಗೆ ಈ ರೀತಿಯ ಶಿಕ್ಷೆ ಎರಡನೇ ಬಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆದಿತ್ಯ ಮೆಹ್ತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
Discussion about this post