ಬೆಂಗಳೂರು, ಸೆ.೯: ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು, ಬಂದ್‌ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ನಾಗರಾಜ್, ಕಾವೇರಿಗಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ನ್ನು ಟೀಕಿಸಿರುವ ಕಿರಣ್ ಮಜುಂದಾರ್ ಅವರಿಗೆ ಹುಚ್ಚು ಹಿಡಿದಿದೆ. ಅವರನ್ನು ನಿಮ್ಹಾನ್ಸ್‌ಗೆ ಕಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿರಣ್ ಮಜುಂದಾರ್ ಅವರು ಕರ್ನಾಟಕದಲ್ಲಿ ಕನ್ನಡಿಗರಿಗೆ ಗೌರವ ನೀಡಿ ಇರುವುದಾದರೆ ಇರಲಿ, ಇಲ್ಲವಾದರೆ ತಕ್ಷಣವೇ ಅವರ ಐಟಿಬಿಟಿ ಸಂಸ್ಥೆ ಸಹಿತ ಗಂಟು ಮೂಟೆ ಕಟ್ಟಿ ಅವರ ಊರಿಗೆ ಹೊರಡಲಿ ಎಂದು ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಬಂದ್ ಕುರಿತಾಗಿ ಇಂದು ಟ್ವೀಟ್ ಮಾಡಿದ್ದ ಕಿರಣ್ ಮಜೂಂದಾರ್, ಬೆಂಗಳೂರನ್ನು ಬಂದಳೂರು ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೊಂದು ಬಂದ್… ಬೆಂಗಳೂರು ಬಂದಳೂರಾಗಿ ಬದಲಾಗುತ್ತಿದೆ. ಪದೇ ಪದೇ ಬಂದ್ ಮಾಡುವ ಮೂಲಕ ಉತ್ಪಾದನಾ ಕ್ಷೇತ್ರದ ಮೆಲೆ ಗಂಭೀರ ಪರಿಣಾಮ ಬೀರುತ್ತದೆ. ಉಭಯ ರಾಜ್ಯಗಳ ರೈತರೂ ಸಂಕಷ್ಟದಲ್ಲಿದ್ದಾರೆ. ಎಂತಹ ಸಂಕಷ್ಟ ಸ್ಥಿತಿ.. ಎಂದು ಕಿರಣ್ ವ್ಯಂಗ್ಯವಾಡಿದ್ದಾರೆ.
Discussion about this post