Read - < 1 minute
ನವದೆಹಲಿ: ಸೆ:10: ಬಾಲಿವುಡ್ನ ಓರ್ವ ಜನಪ್ರಿಯ ನಟ ಹಾಗೂ ಕೆಲವು ಪ್ರಭಾವಿ ಭಾರತೀಯರ ಅಕ್ರಮ ಹಣವನ್ನು ವಿದೇಶಕ್ಕೆ ರವಾನಿಸಿ ಅಲ್ಲಿ ಸುರಕ್ಷಿತವಾಗಿಡಲು ಮೋಸ್ಟ್ ವಾಂಟೆಡ್ ಪಾತಕಿ ಪಾತಕಿ ದಾವೂದ್ ಇಬ್ರಾಹಿಂ ನೆರವು ನೀಡಿದ್ದಾನೆ ಎಂಬ ಸಂಗತಿ ಇದೀಗ ಬಯಲಾಗಿದೆ.
ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ನ ಸಜರ್ಾದಲ್ಲಿರುವ ದಾವೂದ್ನ ಇಬ್ಬರು ಏಜೆಂಟ್ಗಳ ಮೊಬೈಲ್ ಫೋನ್ ಕರೆಗಳನ್ನು ಭದ್ರತಾಪಡೆಗಳು ರಹಸ್ಯವಾಗಿ ಸ್ವೀಕರಿಸಿದ ನಂತರ ಈ ಸಂಗತಿ ಬೆಳಕಿಗೆ ಬಂದಿದೆ.
ಬಿ-ಟೌನ್ನ ಪ್ರಸಿದ್ಧ ನಟ ಹಾಗೂ ಭಾರತದ ಕೆಲವು ಪ್ರಭಾವಶಾಲಿಗಳು ತಾವು ಗಳಿಸಿರುವ ಅಕ್ರಮ ಹಣವನ್ನು ಕೆನಡಾ ಮತ್ತು ಪನಾಮದಲ್ಲಿ ಸುರಕ್ಷಿತವಾಗಿ ಇರಿಸಲು ದಾವೂದ್ನ ಕುಖ್ಯಾತ ಡಿ-ಕಂಪೆನಿಯ ಸಹಾಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಭಯೋತ್ಪಾದನೆ ಸಂಘಟನೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣದ ನೆರವನ್ನೂ ನೀಡುತ್ತಿರುವ ದಾವೂದ್ ಬಡೇ ಹಜರತ್ ಎಂಬ ಹೊಸ ಕೋಡ್ ವಡರ್್ ಬಳಸುತ್ತಿರುವ ಸಂಗತಿಯೂ ಕೂಡ ಇದರಿಂದ ಬಯಲಾಗಿದೆ.
Discussion about this post